ಮಂಗಳೂರು,ಫೆ.17 : ಮಂಗಳೂರಿನ ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ನೆಟ್‌ವರ್ಕ್ ಜಾಮರ್ ಅಳವಡಿಸಿದ ಪರಿಣಾಮವಾಗಿ ಇಲ್ಲಿನ ಸುತ್ತಲಿನ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಸರ್ವಿಸ್ ಇಲ್ಲದೆ ಸಾರ್ವಜನಿಕರು ದಿನನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಜೆ.ಆರ್. ಲೋಬೊರವರ ಗಮನಕ್ಕೆ ತಂದಿದ್ದರು. ಇವರ ಮನವಿಗೆ ಸ್ಪಂದಿಸಿದ ಶಾಸಕರು ತಕ್ಷಣ ಗೃಹ ಕಾರ್ಯದರ್ಶಿ ಶ್ರೀ ಗಗನ್ ದೀಪ್‌ರವರ ಜೊತೆ ಮಾತನಾಡಿ ಸಾರ್ವಜನಿಕರಿಗೆ ಆಗುವ ಅನಾನುಕೂಲತೆಯ ಬಗ್ಗೆ ಅವರ ಗಮನವನ್ನು ಸೆಳೆದರು.
ಇದಕ್ಕೆ ಪ್ರತಿಕ್ರ್ರಿಯಿಸಿದ ಗೃಹ ಕಾರ್ಯದರ್ಶಿಗಳು ಈ ಬಗ್ಗೆ ಮೊಬೈಲ್ ನೆಟ್ ವರ್ಕ್ ಸೇವಾ ಪೂರೈಕೆದಾರರ ಜೊತೆ ಮಾತನಾಡಿ ಅತೀ ಶೀಘ್ರದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕರಿಗೆ ಭರವಸೆ ನೀಡಿದ್ದಾರೆ.