ಕನ್ನಡ ವಾರ್ತೆಗಳು

ಅಂಗವಿಕಲ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ ಹಾಗೂ ಬಡತನ ನಿರ್ಮೂಲನಾ ಕೋಶದ ನೂತನ ಕಚೇರಿ ಉದ್ಘಾಟನೆ.

Pinterest LinkedIn Tumblr

Mcc_poverty_cell_1

ಮಂಗಳೂರು,ಫೆ.17 : ಮ.ನ.ಪಾದ ಯೋಜನೆಯಡಿ ಬಡತನ ನಿರ್ಮೂಲನಾ ಕೋಶದ ನೂತನ ಕಚೇರಿ ಉದ್ಘಾಟನೆ ಹಾಗೂ ಅಂಗವಿಕಲ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆಯನ್ನು ಮಂಗಳವಾರ ಮ.ನ.ಪಾ ಮೇಯರ್ ಜೆಸಿಂತಾ ವಿಜಯ್  ಆಲ್ಪೆರ್ಡ್ ಅವರು ನೇರವೇರಿಸಿದ್ದರು.

ಕೋಶ ಉದ್ಘಾಟಿಸಿ ಮಾತನಾಡಿದ, ಅವರು ಈಗಾಗಲೇ ಫಲಾನುಭವಿಗಳಿಗೆ ಗರಿಷ್ಠ ಮೊತ್ತದಲ್ಲಿ ಅನುದಾನವನ್ನು ಹಂಚಲಾಗಿದೆ. ಅದರೆ ಫಲಾನುಭವಿಗಳ ಅರ್ಜಿ ಸಂಖ್ಯೆ ಹೆಚ್ಚಾಗಿದರಿಂದ ಹಾಗೂ ಅನುದಾನ ಮೊತ್ತದ ಕೊರತೆ ಇರುವುದರಿಂದ ಸಾಕಷ್ಟು ಫಲಾನುಭವಿಗಳಿಗೆ ಅನುದಾನ ತಲುಪಿಸಲು ಅಸಾಧ್ಯವಾಗಿದೆ.

5 ಮಂದಿಗೆ 92,500 ರೂ. ಮೊತ್ತದ ಅಂಗವಿಕಲರ ಸಲಕರಣೆ, 9 ಮಂದಿಗೆ 48,423 ರೂ. ಮೊತ್ತದ ವೈದ್ಯಕೀಯ ವೆಚ್ಚ ಪಾವತಿ, 8 ಸಂಘ ಸಂಸ್ಥೆಗಳಿಗೆ 1.20 ಲಕ್ಷ .ರೂ. ಮೊತ್ತದ ಸಹಾಯಧನ, 5 ಮಂದಿಗೆ 36,250 ರೂ, ಮೊತ್ತದ ಟೈಲರಿಂಗ್ ಯಂತ್ರ ಹಾಗೂ ತಲಾ ಓರ್ವರಿಗೆ 50 ಸಾವಿರ ರೂ. ಗಳ ಸ್ವ ಉದ್ಯೋಗ ಮತ್ತು 25 ಸಾವಿರ ರೂ. ಮನೆ ನಿರ್ಮಾಣದ ಮೊದಲ ಕಂತನ್ನು ಈ ಸಂಧರ್ಭ್ದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

Mcc_poverty_cell_2 Mcc_poverty_cell_3 Mcc_poverty_cell_4 Mcc_poverty_cell_5 Mcc_poverty_cell_6 Mcc_poverty_cell_7 Mcc_poverty_cell_8 Mcc_poverty_cell_9 Mcc_poverty_cell_10

ಮಾರ್ಚ್ 7 ರಂದು ಅರ್ಹ 700 ಮಂದಿಗೆ ಗ್ಯಾಸ್‍ ಕಿಟ್‍ ಗಳು, 530 ಮಂದಿಗೆ ಅಶಕ್ತರಿಗೆ ಪೋಷಣಾ ಭತ್ಯೆ, 56 ಮಂದಿಗೆ ಆಟೋರಿಕ್ಷಾ ಹಾಗೂ 4 ಮಂದಿ ಅಂಗವಿಕಲರಿಗೆ ದ್ವಿಚಕ್ರ ವಾಹನ ಒಟ್ಟು 1290 ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆಯನ್ನು ನಗರದ ಪುರಭವನದಲ್ಲಿ ವಿತರಿಸಲಾಗುವುದು ಎಂದು ಪಾಲಿಕೆಯ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಈ ಸಂಧರ್ಭದಲ್ಲಿ ತಿಳಿಸಿದರು.

ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು, ಸದಸ್ಯರುಗಳಾದ ದೀಪಕ್ ಪೂಜಾರಿ, ವಿಜಯಕುಮಾರ್ ಶೆಟ್ಟಿ, ಕಾರ್ಪೊರೇಟರ್ ರಜನೀಶ್, ರೂಪಾ ಡಿ. ಬಂಗೇರಾ, ಜಯಂತಿ ಆಚಾರ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment