ಕುಂದಾಪುರ: ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ ಹಾಗೂ ಪಂಜುರ್ಲಿ ದೈವಸ್ಥಾನದಲ್ಲಿ ಹಾಲುಹಬ್ಬ ಕೆಂಡಸೇವೆ ಮಂಗಳವಾರ ನಡೆಯಿತು. ಈ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿದವರು ಸಿನೆಮಾ ಹಾಗೂ ಕಿರುತೆರೆ ನಟಿಯರು.
ಮುಂಗಾರುಮಳೆ ಖ್ಯಾತಿಯ ಮಳೆ ಹುಡುಗಿ ಪೂಜಾಗಾಂಧಿ, ಬಿಗ್ ಬಾಸ್ ಖ್ಯಾತಿಯ ಸುಷ್ಮಾ, ಕಿರುತೆರೆ ನಟರಾದ ವಸಂತಕುಮಾರ್, ರಾಮಸ್ವಾಮೀ, ವಿಜಯ್, ಜೀವನ್, ವಿಜಯ್ ಪಾಟೀಲ್, ಸಿನೆಮಾ ನಟ ವಿ.ಕೆ. ಅಭಿಷೇಕ್ ಇದ್ದರು.
ಸಿನೆಮಾ ಹಾಗೂ ಕಿರುತೆರೆ ನಟನಟಿಯರನ್ನು ಕಂಡು ನೆರೆದಿದ್ದ ಜನರು ಸೆಲ್ಫಿ ತೆಗೆದುಕೊಳ್ಳುವ ದ್ರಶ್ಯವೂ ಕಂಡುಬಂದಿತ್ತು.
ದೈವಸ್ಥಾನದಲ್ಲಿ ಕೆಂಡಸೇವೆ ಹಾಲುಹಬ್ಬದ ಪ್ರಯುಕ್ತ ಕಲಾಭಿವ್ರದ್ಧಿ ಹೋಮ, ಕಲಶಾಭಿಷೇಕ, ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಜರುಗಿತು. ವಕ್ವಾಡಿ ಮೂಲದ ಬೆಂಗಳೂರು ಉದ್ಯಮಿ ವಿ.ಕೆ. ಮೋಹನ್ ಅನ್ನಸಂತರ್ಪಣೆಯ ಸೇವಾಕರ್ತರಾಗಿದ್ದರು. ಮಧ್ಯಾಹ್ನ ನಡೆದ ವಿವಿಧ ಧಾರ್ಮಿಕ ಹಾಗೂ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರು ಪಾಲ್ಘೊಂಡಿದ್ದರು. ಈ ಸಂದರ್ಭ ವಿ.ಕೆ. ಮೋಹನ್, ವಿ.ಕೆ. ಹರೀಶ್, ವಿ.ಕೆ. ಸತೀಶ್, ವಿ.ಕೆ. ರಾಘವೇಂದ್ರ ಹಾಗೂ ಕುಟುಂಬಸ್ಥರು, ಗೋಳಿಹಾಡಿ ಶ್ರೀ ನಂದಿಕೇಶ್ವರ ಮತ್ತು ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಕರುಣಾಕರ ಶೆಟ್ಟಿ ಮೇಲ್ಮನೆ, ಸುರೇಂದ್ರ ಶೆಟ್ಟಿ ಮೇಲ್ಮನೆ, ಶ್ಯಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.