ಮಂಗಳೂರು / ಸುಳ್ಯ :ಮಿನಿ ಲಾರಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತವೊಂದರಲ್ಲಿ ಕಾಲೇಜು ಪ್ರಾಧ್ಯಾಪಕರೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸುಳ್ಯ ತಾಲೂಕಿನ ಜಾಲ್ಸೂರು ಸಮೀಪದ ಅಡ್ಕಾರ್‌ನಲ್ಲಿ ಸಂಭವಿಸಿದೆ.
ಮೃತರನ್ನು ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಮಹಾಬಲ ಕಿರಣ್ (30) ಎಂದು ಗುರುತಿಸಲಾಗಿದೆ.
ಮಹಾಬಲ ಕಿರಣ್ ಅವರು ಬೈಕ್ ನಲ್ಲಿ ಮನೆಗೆ ಬರುತ್ತಿದ್ದಾಗ ಅಡ್ಕಾರ್ ಸಮೀಸುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಸ್ವರಾಜ್ ಮಜ್ದಾ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ಕೂಡಲೇ ಬೈಕ್ ಗೆ ಬೆಂಕಿ ಹತ್ತಿಕೊಂಡಿದ್ದು, ಸುಟ್ಟ ಗಾಯಗೊಂಡ ಮಹಾಬಲ ಕಿರಣ್ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.
ಶಿವಶಂಕರ ಭಟ್ ಪ್ರೇಮಾ ದಂಪತಿಯ ಏಕೈಕ ಪುತ್ರರಾಗಿದ್ದ ಮಹಾಬಲರವರು ಪತ್ನಿ ಭವ್ಯಶ್ರೀ, ಪುತ್ರಿ ಅಕ್ಷಯರನ್ನು ಅಗಲಿದ್ದಾರೆ. ಮೂಲತ ಏತಡ್ಕ ನಿವಾಸಿಯಾಗಿರುವ ಈ ಕುಟುಂಬ ಇತ್ತೀಚೆಗಷ್ಟೇ ಬೇಳಕ್ಕೆ ಬಂದು ನೆಲೆಸಿದ್ದರು ಎನ್ನಲಾಗಿದೆ.