ರಾಷ್ಟ್ರೀಯ

ಕೇರಳ ವಿಧಾನಸಭಾ ಆವರಣದಲ್ಲಿ ಕಲ್ಪವೃಕ್ಷ ಏರಿ ಕಲ್ಯಾಣ ಯೋಜನೆಗಳಿಗೆ ಆಗ್ರಹಿಸಿದ ವ್ಯಕ್ತಿ

Pinterest LinkedIn Tumblr

cocunut-treeತಿರುವನಂತಪುರಮ್: ತೆಂಗಿನ ತೋಟಗಳಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಕೇರಳ ವಿಧಾನಸಭಾ ಆವರಣದಲ್ಲಿ ಮಂಗಳವಾರ ತೆಂಗಿನ ಮರ ಏರಿ, ಮೇಲಿನಿಂದ ಬೀಳುವ ಬೆದರಿಕೆ ಹಾಕಿದ್ದರಿಂದ ಉದ್ವಿಗ್ನ ವಾತಾವರಣ ಉಂತಾಗಿತ್ತು.

ಕಣ್ಣೂರಿನ ಟಿ ಸುಧೀರ್ ಕುಮಾರ್, ಭದ್ರತೆಯನ್ನು ಬೇಧಿಸಿ ಸುಮಾರು ೧೧:೪೫ಕ್ಕೆ ತೆಂಗಿನ ಮರ ಏರಿ ಕುಳಿತಿದ್ದಾರೆ. ತೆಂಗಿನ ತೋಟಗಳಲ್ಲಿ ಮರ ಏರಿ ಕಾಯಿ ಕೀಳುವ ಕೆಲಸಗಾರರಿಗೆ ಪಿಂಚಣಿ ಮತ್ತು ಇತರ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಬೇಕೆಂದು ಬೇಡಿಕೆಯಿಟ್ಟಿದ್ದಾರೆ.

ಕೂಡಲೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ವ್ಯಕ್ತಿಗೆ ಕೆಳಗಿಳಿಯುವಂತೆ ಮನವಿ ಮಾಡಿಕೊಂಡಿದೆ. ನಂತರ ತೆಂಗಿನ ಮರ ಏರುವವರ ಸಂಘದ ಮುಖಂಡರು ಬಂದು ೧ ಘಂಟೆಯ ಹೊತ್ತಿಗೆ ಮರ ಏರಿದ್ದ ವ್ಯಕ್ತಿಯನ್ನು ಕೆಳಗಿಳಿಯಲು ಮನವೊಲಿಸಿದ್ದಾರೆ.

Write A Comment