ಉಳ್ಳಾಲ,ಫೆ.11 : ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅನ್ನಾಹಾರ ವಿತರಣೆ ಮಾಡಿ ಸಹಕಾರ ನೀಡಿದವರಿಗೆ ಅಲ್ಲಾಹನ ರಕ್ಷನೆ ಇದೆ. ಒಪ್ಪೊತ್ತಿನ ಊಟದ ಗತಿಯಿಲ್ಲದ ಕುಟುಂಬಗಳನ್ನು ಗುರುತಿಸಿ ಅಕ್ಕಿ ವಿತರಣೆ ನಾಡುವುದು ಬಹು ದೊಡ್ಡ ಸೇವೆಯಾಗಿದೆ. ಎಂದು ಕರ್ನಾಟಕ ರಾಜ್ಯ ಎಸ್‌ವೈಎಸ್ ಕಾರ್ಯದರ್ಶಿ ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಹೇಳಿದರು.
ಅವರು ಸೇವಂತಿ ಗುಡ್ಡೆ ವಿಯಾತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಸಅದಿಯ ಸಮ್ಮೇಳನದ ಪ್ರಚಾರಾರ್ಥ ಮತ್ತು ಸುಲ್ತಾನುಲ್ ಆರಿಫೀನ್ ಅಹ್ಮದುಲ್ ಕಬೀರು ರ್ರಿಫಾಯ್ಯಿಯವರ ಸ್ಮರಣಾರ್ಥ ಏರ್ಪಡಿಸಿದ ಅಕ್ಕಿ ವಿತರಣಾ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಜನಸೇವೆಯನ್ನು ಮುಖ್ಯ ಗುರಿಯಾಗಿ ಇಟ್ಟುಕೊಂಡು ಉತ್ತಮ ಕೆಲಸ ಮಾಡಬೇಕಾದ ಕರ್ತವ್ಯ ನಮ್ಮುಂದಿದೆ. ಇಂತಹ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಏರ್ಪಡಿಸಿತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕ್ಫ್‌ಬೋರ್ಡ್‌ನ ದ.ಕ. ಜಿಲ್ಲಾಧ್ಯಕ್ಷ ಎಸ್.ಎಂ. ರಶೀದ್ ಹಾಜಿ ವಹಿಸಿದ್ದರು. ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೆಸಿಎಫ್ ಮಲಝ್ ಕಮಿಟಿ ಪ್ರ. ಕಾರ್ಯದರ್ಶಿ ಝಮೀರ್, ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಅಬ್ದುಲ್ ಹಕೀಂ ಮದನಿ, ಎಸ್ಸೆಸೆಫ್ ತೊಕ್ಕೊಟ್ಟು ಸೆಕ್ಟರ್ ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ,ಕಾರ್ಯದರ್ಶಿ ಬಾತಿಷ್ ಮಂಚಿಲ, ಮುಹಮ್ಮದ್ ಮದನಿ, ಅಬೂಬಕರ್ ಜೆಪ್ಪು ಮೊದಲಾದವರು ಉಪಸ್ಥಿತರಿದ್ದರು.ಇಲ್ಯಾಸ್ ಸಖಾಫಿ ಅಂಬ್ಲಮೊಗರು ಅತಿಥಿಗಳನ್ನು ಸ್ವಾಗತಿಸಿದರು.
ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಪ್ರ. ಕಾರ್ಯದರ್ಶಿ ಜಾಫರ್ ಯು.ಎಸ್. ದನ್ಯವಾದ ಸಮರ್ಪಿಸಿದರು. ಎಸ್ಸೆಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಚಯರ್‌ಮ್ಯಾನ್ ಅಲ್ತಾಫ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.