ಉಡುಪಿ: ಸಹೋದರಿಯನ್ನೇ ರೇಪ್ ಮಾಡಿದ್ದ ಕಾಮುಕ ಸಹೋದರನನ್ನು ಉಡುಪಿಯ ಮಲ್ಪೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
14 ವರ್ಷ ಪ್ರಾಯದ ಸಹೋದರಿಯನ್ನೇ ರೇಪ್ ಮಾಡಿದ ಕಾಮುಕ ಶ್ರೀಧರ (22) ಸದ್ಯ ಬಂಧಿತನಾಗಿದ್ದಾನೆ.
ತೆಂಕನಿಡಿಯೂರಿನಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕಿಯನ್ನು ಬೆದರಿಸಿದ್ದ ಸ್ವಂತ ಅಣ್ಣ ಶ್ರೀಧರ ಜೂನ್ ಮತ್ತು ಆಗಸ್ಟ್ ತಿಂಗಳಿನಲ್ಲಿ ಬಲಾತ್ಕಾರ ನಡೆಸಿದ್ದನೆನ್ನಲಾಗಿದೆ. ಸೆಪ್ಟಂಬರ್ ತಿಂಗಳಲ್ಲಿ ಬಾಲಕಿ ಗರ್ಭಿಣಿಯಾದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಮನೆಮಂದಿಗೆ ತಿಳಿದಿದ್ದು ಸೆ. 15ರಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಬಾಲಕಿಯಿಂದ ಯಾವುದೇ ಸುಳಿವು, ಮಾಹಿತಿ ಸಿಕ್ಕಿರಲಿಲ್ಲ. ಅದರಿಂದಾಗಿ ಅಣ್ಣ ಶ್ರೀಧರನ ಸಹಿತ ಶಂಕಿತ ಐವರನ್ನು ಡಿಎನ್‌ಐ ಟೆಸ್ಟ್‌ಗೆ ಒಳಪಡಿಸಲಾಗಿತ್ತು.
ಸದ್ಯ ಡಿ.ಎನ್.ಎ. ವರದಿಯು ಪೊಲೀಸರ ಕೈ ಸೇರಿದ್ದು ಈ ಅಮಾನುಷ ಕೃತ್ಯವೆಗಿರುವುದು ಬಾಲಕಿ ಅಣ್ಣ ಶ್ರೀಧರನೆಂದು ಸಾಭೀತಾಗಿತ್ತು. ಅದರ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.