ಕನ್ನಡ ವಾರ್ತೆಗಳು

ಫೆ.13: ಕಾಶೀ ಮಠಾಧೀಶರ ಮಂಗಳೂರು ” ಪುರ ಪ್ರವೇಶ “

Pinterest LinkedIn Tumblr

matha_disha_purapravesha

ಮಂಗಳೂರು,ಫೆ.10 : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರತಿಷ್ಟಿತ ದೇವಳದೊಂದಾದ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ವಾರ್ಷಿಕ ಮಹೋತ್ಸವವಾದ ” ಮಂಗಳೂರು ರಥೊಥ್ಸವ ” ಇದೇ ಬರುವ ಆದಿತ್ಯವಾರ ದಂದು ಕಾಶೀ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿರುವುದು .

ಈ ಪ್ರಯುಕ್ತ ರಥೊಥ್ಸವದ ಪ್ರಾರಂಭವು ಬುಧವಾರ ಧ್ವಜಾರೋಹಣ ದೊಂದಿಗೆ ಪ್ರಾರಂಭವಾಗಲಿದ್ದು ಐದು ದಿನಗಳ ಪರ್ಯಂತ ನೆರವೇರಲಿರುವುದು . ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಕಾಶೀ ಮಠಾಧೀಶರಾದ ಬಳಿಕ ಪ್ರಪ್ರಥಮ ಬಾರಿಗೆ ರಥಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳಲಿರುವರು.

ಈ ಪ್ರಯುಕ್ತ ಶ್ರೀ ಗಳವರು ವಿಶೇಷ ಅಡ್ಡ ಪಲ್ಲಕಿಯಲ್ಲಿ ವಿರಾಜಮಾನಲಾಗಲಿರುವರು ಸಾಯಂಕಾಲ ೬:೩೦ ಕ್ಕೆ ರಥ ಬೀದಿಯ ಸ್ವದೇಶೀ ಸ್ಟೋರ್ ಬಳಿಯಿಂದ ” ಪುರ ಪ್ರವೇಶ ” ಪ್ರಾರಂಭ ವಾಗಲಿದ್ದು ವಿವಿಧ ವಾದ್ಯ , ಬಿರುದು ಬಾವಳಿಗಳೊಂದಿಗೆ ಶ್ರೀಗಳವರನ್ನು ಸ್ವಾಗತಿಸಲಾಗುವುದು.

ಊರ , ಪರವೂರ ಸಮಾಜ ಭಾಂಧವರು ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಶ್ರೀ ದೇವಳದ ಮೊಕ್ತೇಸರ ರಾದ ಪದ್ಮನಾಭ ಪೈ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತಾರೆ .

ಚಿತ್ರ : ಮಂಜು ನೀರೆಶ್ವಲ್ಯ್ಯ

Write A Comment