ಕನ್ನಡ ವಾರ್ತೆಗಳು

ರಾಷ್ಟ್ರೀಯ ಜಂತುಹುಳು ನಿರ್ಮೂಲನ ದಿನಾಚರಣೆ

Pinterest LinkedIn Tumblr

jantu_hula_nemulane_1

ಮಂಗಳೂರು,ಫೆ.10:  ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ ಹಾಗೂ. ಬದ್ರಿಯಾ ಚಾರಿಟಬಲ್ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಂತುಹುಳು ನಿರ್ಮೂಲನ ದಿನಾಚರಣೆ 2016 ಉದ್ಘಾಟನಾ ಕಾರ್ಯಕ್ರಮ ಬದ್ರಿಯಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಿ.ಇ.ಒ ಶ್ರೀವಿದ್ಯಾ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣರಾವ್ ಮಾತನಾಡಿ, ಇಂದು ರಾಷ್ಟ್ರೀಯ ಜಂತುಹುಳ ನಿವಾರಣ ದಿನ ಆಚರಿಸಲಾಗುತ್ತಿದ್ದು, 1ರಿಂದ 19 ವರ್ಷದೊಳಗಿನ ಎಲ್ಲಾ ಅಂಗನವಾಡಿ,ಶಾಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಔಷಧಿ (ಆಲ್ಬೆಂಡಝೋಲ್ )ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.jantu_hula_nemulane_2 jantu_hula_nemulane_3 jantu_hula_nemulane_4

ಜಂತುಹುಳುಗಳು ಮನುಷ್ಯನ ಕರುಳಿನಲ್ಲಿ ಜೀವಿಸುತ್ತಿರುವ ಉಪಜೀವಿಗಳಾಗಿದ್ದು, ಕರುಳಿನಲ್ಲಿರುವ ಪೋಷಕಾಂಶ, ಪ್ರೋಟಿನ್, ಹಾಗೂ ರೋಗನಿರೋಧಕ ಶಕ್ತಿಯನ್ನು ಹೀರಿ ದುರ್ಬಲಗೊಳಿಸುತ್ತದೆ.ಇದರಿಂದಾಗಿ ಆರೋಗ್ಯ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಆದ್ದರಿಂದ 1 ವರ್ಷದಿಂದ19  ವರ್ಷದೊಳಗಿನ ಎಲ್ಲಾ ಮಕ್ಕಳು ಈ ಔಷಧಿಯನ್ನು ಸೇವಿಸಿ ಆರೋಗ್ಯಯುತರಾಗಿರಬಹುದಾಗಿದೆ ಎಂದರು.

ಈ ವೇಳೆ ಸಿ.ಇ.ಒ ಶ್ರೀವಿದ್ಯಾ ಮಾತನಾಡಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅತೀದೊಡ್ಡ ಕಾರ್ಯಕ್ರಮವಿದಾಗಿದ್ದು, ಜಂತುಹುಳು ನಿವಾರಣೆಗೆ ಭಾರತದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ ಆಚರಿಸಲಾಗುತ್ತಿದೆ. ಭವಿಷ್ಯದ ಭಾರತಕ್ಕಾಗಿ ಇದು ಅವಶ್ಯಕವಾಗಿದ್ದು, ಕಳೆದ ೨ವರ್ಷಗಳಲ್ಲಿ ಜಂತುಹುಳುಗಳಿಂದ ಬರುವ ರೋಗಗಳ ಸಂಖ್ಯೆ ಇಳಿಮುಖವಾಗಿದೆ ಎಂದ್ರು. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಕಾಡುವ ಸಮಸ್ಯೆಗಳನ್ನು ತಡೆಯಬಹುದಾಗಿದೆ ಎಂದರು.

ಈ ವೇಳೆ ಬದ್ರಿಯಾ ಕಾಲೇಜು ಪ್ರಾಂಶುಪಾಲರಾದ ಇಸ್ಮಾಯಿಲ್ ಎನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕ ಸುಂದರ ಪೂಜಾರಿ, ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ರಾಮಕೃಷ್ಣ ರಾವ್, ಡಾ.ಸಿಖಂದರ್ ಪಾಷಾ ಮೊದಲಾದವರು ಉಪಸ್ಥಿತರಿದ್ದರು

ಜ್ಯೋತಿ ಕೆ.ಸ್ವಾಗತಿಸಿದ್ರು, ಉಪನ್ಯಾಸಕ ಯೂಸುಫ್ ಕಾರ್ಯಕ್ರಮ ನಿರೂಪಿಸಿದರು.

Write A Comment