
ಮಂಗಳೂರು: ರಸ್ತೆ ಅಪಘಾತದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ( ಸುರತ್ಕಲ್ ಕ್ಷೇತ್ರ) ಶಾಸಕ ಮೊಯ್ದಿನ್ ಬಾವ ಅವರ ಕಾರು ಚರಂಡಿಯೊಂದಕ್ಕೆ ಬಿದ್ದ ಪರಿಣಾಮ ಶಾಸಕ ಮೊಯ್ದಿನ್ ಬಾವ ಹಾಗೂ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಶಾಸಕ ಮೊಯ್ದಿನ್ ಬಾವ ಅವರು ಬೆಂಗಳೂರಿಗೆ ಪ್ರಯಾಣಿಸುವ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ತಮ್ಮ ಕಾರಿನಲ್ಲಿ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಪಣಂಬೂರು ಎಂಸಿಎಫ್ ಬಳಿ ರೈಲ್ವೆ ಗೇಟ್ ದಾಟುತ್ತಿದ್ದ ಸಂದರ್ಭ ವ್ಯಕ್ತಿಯೊಬ್ಬ ಅವರ ಕಾರಿಗೆ ಅಡ್ಡ ಬಂದಿದ್ದು, ಅ ವ್ಯಕ್ತಿಗೆ ತಮ್ಮ ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಕಾರು ಚರಂಡಿಗೆ ಬಿದ್ದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಮೊಯ್ದಿನ್ ಬಾವ ಅವರ ಎಡಗೈಗೆ ಸ್ಬಲ್ಪ ತಾಗಿಧ್ದು, ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇದೀಗ ಇಬ್ಬರು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.