ಉಡುಪಿ: ಇತ್ತೀಚಿಗಿನ ದಿನಗಳಲ್ಲಿ ಕಾಡು ಕಡಿದು ನಾಡನ್ನಾಗಿಸುವ ತವಕದಲ್ಲಿ ಕಾಡು ಪ್ರಾಣಿಗಳೆಲ್ಲ ದಿಕ್ಕು ತಪ್ಪಿ ನಾಡಿಗೆ ಸೇರುತ್ತಿರುವುದು ಅದರಲ್ಲೂ ಚಿರತೆ ,ಜಿಂಕೆ , ಕಡವೆ, ಇನ್ನಿತರ ಪ್ರಾಣಿ ಪಕ್ಷಿಗಳು ಗ್ರಾಮಾಂತರ ಪ್ರದೇಶಗಳಿಗೆ ವಲಸೆ ಬಂದು ಜನರಲ್ಲಿ ಭಯದ ವಾತಾವರಣ ಸೃಷ್ಠಿಸಿದೆ.
ಇದಕ್ಕೆ ಪುಷ್ಟಿ ನೀಡುವಂತೆ ದೊಡ್ಡ ಗಾತ್ರದ ಕೋತಿ ಕುಂದಾಪುರ ಕನ್ನಡ ಭಾಷೆಯಲ್ಲಿ ಹೇಳಬೇಕಾದರೇ ಬುಕ್ಕಾ ಎನ್ನುವ ಪ್ರಾಣಿಯೊಂದು ಕೋಟತಟ್ಟು ಗ್ರಾಮಪಂಚಾಯತ್ನ ವ್ಯಾಪ್ತಿಯ ಬಾರಿಕೆರೆ ಎಂಬವಲ್ಲಿ ಹಲವು ದಿನಗಳಿಂದ ಸಮಸ್ಯೆ ಉಂಟು ಮಾಡುತ್ತಿದ್ದುಜನರಲ್ಲಿ ಆತಂಕವನ್ನು ಉಂಟುಮಾಡಿದೆ.

ಕುಂದಾಪುರದ ಭಾಷೆಯಲ್ಲಿ ಬುಕ್ಕಾ ಎಂಬ ಮಂಗನ ಜಾತಿಗೆ ಹೋಲುವ ಪ್ರಾಣಿಯೊಂದು ಸಾರ್ವಜನಿಕರನ್ನು ಅಟ್ಟಿಕೊಂಡು ಮೈಮೇಲೆ ಎರಗಿ ಭಯದ ವಾತವರಣ ನಿರ್ಮಿಸಿದ್ದು ಇದರಿಂದ ಸಾರ್ವಜನಿಕರು ಮನೆಯಿಂದ ಹೊರೆಗೆ ಬರಲು ಯೋಚಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ದೊಡ್ಡ ಗಾತ್ರದ ಕೋತಿಯ ದುರ್ವರ್ತನೆಗೆ ಬೆದರಿದ ಸ್ಥಳೀಯರು ಮಾಧ್ಯಮ ಪ್ರತಿನಿಧಿಗಳ ಮೂಲಕ ಅರಣ್ಯ ಇಲಾಖೆಯವರ ಗಮನಕ್ಕೆ ತಂದರು. ಈ ಬಗ್ಗೆ ಎಚ್ಚೆತ್ತುಕೊಂಡ ಇಲಾಖೆಯವರು ಸ್ಥಳಕ್ಕಾಗಮಿಸಿ ಈ ಕೋತಿ ಸೆರೆಗೆ ಬೋನ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಸುಮಾರು ಹತ್ತು ದಿನಗಳಿಂದ ಈ ಪರಿಸರದಲ್ಲಿ ಈ ಕೋಪಿಷ್ಟ ಕೋತಿ ಓಡಾಡಿಕೊಂಡಿದ್ದು ದಾರಿಯಲ್ಲಿ ಹೊಗುವರನ್ನು ಅಡ್ಡಗಟ್ಟಿ ಬೇದರಿಸುತ್ತಿದ್ದು.ಅದರಲ್ಲಿ ಒಂದಿಬ್ಬರನ್ನು ಅಟ್ಟಿಸಿ ಕೊಂಡು ಹೋಗಿ ಅವರುಗಳು ಬಿದ್ದ ಪರಿಣಾಮ ಅವರ ಕೈಕಾಲುಗಳು ಮುರಿದು ಹೊಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯರಾದ ಅಕ್ಕಯ್ಯ ಗಾಣಿಗ ತಮ್ಮ ಅಳಲು ತೋಡಿಕೊಂಡಿದ್ದಾರೆ.
ವರದಿ- ಯೋಗೀಶ್ ಕುಂಭಾಸಿ