ತೊಕ್ಕೊಟ್ಟು, ಫೆ.04: ಉಳ್ಳಾಲದ ಬಂಡಿಕಟ್ಟೆಯಲ್ಲಿ ಮಹಿಳೆಯೊವ್ವರು ಜೀವನದಲ್ಲಿ ಜಿಗುಪ್ಸೆಗೊಂಡ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ನಡೇದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಕುಂಪಲದ ಕುಜುಮಗದ್ದೆ ನಿವಾಸಿ ದಿ. ಸುಂದರ ಪೂಜಾರಿ ಅವರ ಪತ್ನಿ ಮೋಹಿನಿ (56) ಎಂದು ಗುರುತಿಸಲಾಗಿದೆ.
ಮೋಹಿನಿ ಅವರು ಇಂದು ಬೆಳಗಿನ ಜಾವ ಕುಂಪಲದ ತನ್ನ ಮನೆಯಿಂದ ಯಾರಿಗೂ ತಿಳಿಸದೆ ಉಳ್ಳಾಲದ ಬಂಡಿಕಟ್ಟೆಯಲ್ಲಿರುವ ಮಾವನ ಮನೆಗೆ ತೆರಳಿದ್ದು, ಅಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಮಾವನ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಮೂಲಗಳು ತಿಳಿಸಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತರು ಪುತ್ರರಾದ ದಿನೇಶ್ ಕುಂಪಲ, ಪ್ರಶಾಂತ್, ಸೊಸೆ ಅಕ್ಷಯ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.