ಮಂಗಳೂರು,ಫೆ.04: ಆಸ್ಟ್ರೇಲಿಯಾದ ಮ್ಯಾರಥಾನ್ ಓಟಗಾರ ಹಾಗೂ ಮಾಜಿ ಸಂಸದ ಪ್ಯಾಟ್ರಿಕ್ ಫಾರ್ಮರ್ ಅವರು ಗುರುವಾರ ಬೆಳಗ್ಗೆ ಕೇರಳದಿಂದ ತಲಪಾಡಿ ಬಳಿ ಕರ್ನಾಟಕ ಗಡಿ ಪ್ರವೇಶಿಸಿದರು. ಅವರನ್ನು ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ ನೇತೃತ್ವದಲ್ಲಿ ಮೈಸೂರು ಪೇಟ ತೋಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು.
ಆಸ್ಟ್ರೇಲಿಯನ್ ಡಾಲರ್ ಸಂಗ್ರಹಿಸಿ ಭಾರತದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವಾಗಲು ಹಣ ಸಂಗ್ರಹಿಸುವುದು ನನ್ನ ಉದ್ದೇಶ ಹಾಗೂ ಈ ಓಟದ ಮೂಲಕ ಆಸ್ಟ್ರೇಲಿಯಾ ಮತ್ತು ಭಾರತ- ನಡಿವಿನ ಬಾಂಧವ್ಯ ಬಲಪಡಿಸುವ ಉದ್ದೇಶದ ಈ ಓಟಕ್ಕೆ ಭಾರತೀಯರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಹೇಳಿದರು.
ಹೆಚ್ಚಿನ ವಿವರ ನಿರೀಕ್ಷಿಸಿರಿ….