ಕನ್ನಡ ವಾರ್ತೆಗಳು

ಸಿಸಿಬಿ ಪೊಲೀಸರ ಕಾರ್ಯಾಚರಣೆ : ಕೊಲೆಗೆ ಸಂಚು – ಐವರ ಬಂಧನ : 3 ತಲವಾರು, 2 ಚೂರಿ, 7 ಮೊಬೈಲ್ ಫೋನ್,ಮಾರುತಿ ಒಮ್ನಿ ಕಾರ್ ವಶ

Pinterest LinkedIn Tumblr

CCB_AREST_FIVE_1

ಮಂಗಳೂರು : ಮಂಗಳೂರು ನಗರದ ಅಡ್ಯಾರು ಗ್ರಾಮದ ಅಡ್ಯಾರು ಕಡವಿನ ಬಳಿಯಲ್ಲಿ ವ್ಯಕ್ತಿವೋರ್ವರ ಕೊಲೆಗೆ ಸಂಚು ರೂಪಿಸಿದ 5 ಮಂದಿಯನ್ನು ದಸ್ತಗಿರಿ ಮಾಡಿ 3 ತಲವಾರುಗಳು, ಚೂರಿ ಹಾಗೂ ಮಾರುತಿ ಒಮ್ನಿ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ದಿನಾಂಕ: 03-02-2016 ರಂದು ಬೆಳಿಗ್ಗೆ ಈ ಹಿಂದೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಕಡವಿನ ಬಳಿ ಸಿಲ್ವರ್ ಬಣ್ಣದ ಮಾರುತಿ ಒಮ್ನಿ ಕಾರಿನಲ್ಲಿ ಯಾವುದೋ ದುಷ್ಕೃತ್ಯವನ್ನು ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸ್ ನಿರೀಕ್ಷಕರಾದ ವೆಲೆಂಟೈನ್ ಡಿ ಸೋಜಾ ಮತ್ತು ಸಿಬ್ಬಂದಿಯವರು ಸದ್ರಿ ಸ್ಥಳಕ್ಕೆ ದಾಳಿಮಾಡಿ ಸ್ಥಳದಲ್ಲಿದ್ದ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಜಿಯಾ @ ಎ.ಕೆ. ರಿಯಾಸ್, ಪ್ರಾಯ(30), ತಂದೆ: ಅಬ್ದುಲ್ ಖಾದರ್, ವಾಸ: ಶ್ಯಾಮ್ ಪ್ರಸಾದ್ ಕ್ಲಿನಿಕ್ ಹಿಂದುಗಡೆ, ಅಡ್ಯಾರು ಕಟ್ಟೆ, ಅಡ್ಯಾರು, ಮಂಗಳೂರು. ಅಜ್ಮಲ್ @ ಅಜ್ಜು, ಪ್ರಾಯ(22), ತಂದೆ: ಅಬ್ದುಲ್ ಹಮೀದ್, ವಾಸ: ಕುಂಡಾಲ ಹೌಸ್, ಬಲ್ಲೂರುಗುಡ್ಡೆ ರಸ್ತೆ, ಕಣ್ಣೂರು, ಮಂಗಳೂರು.
ಮುಸ್ತಾಕ್ ಅಹಮ್ಮದ್, ಪ್ರಾಯ(21), ತಂದೆ: ಎ.ಬಿ ಇಸ್ಮಾಯಿಲ್, ವಾಸ: ಅತಿಕಾ ಮಂಜಿಲ್, ಯೂಸುಫ್ ನಗರ, ಕಣ್ಣೂರು, ಮಂಗಳೂರು ತಾಲೂಕು.
ಮೊಹಮ್ಮದ್ ಫಜಲ್, ಪ್ರಾಯ(21), ತಂದೆ: ಜಿ. ಮಹಮ್ಮದ್, ವಾಸ: ಬೆಳಿಂಜೆ ಅಹಮ್ಮದ್ ಬಾವರವರ ಬಾಡಿಗೆ ಮನೆ, ಅಮ್ಮೆಮಾರು ಶಾಲೆಯ ಬಳಿ, ಮಂಗಳೂರು. ಖಾಯಂ ವಿಳಾಸ: ಕಣ್ಣೂರು ಗಾಣದಬೆಟ್ಟು ಮನೆ, ಮಂಗಳೂರು.ಬಾಶಿತ್, ಪ್ರಾಯ(21), ತಂದೆ: ಅಬ್ದುಲ್ ಲತೀಫ್, ವಾಸ: ಫ್ಲಾಟ್ ನಂಬ್ರ: 103, ಆರ್. ಎನ್ ಆಪಾರ್ಟ್ ಮೆಂಟ್, ಶಾದಿಮಹಲ್ ಬಳಿ, ಪಾಂಡೇಶ್ವರ, ಮಂಗಳೂರು ಎಂದು ಗುರುತಿಸಲಾಗಿದೆ.

(The arrested persons, identified as Zia alias A K Riyaz (30), a resident of Adyar, Kannur residents Ajmal alias Ajju (22), Mushtaque Ahmad (21) and Mohammed Fazal (21) and Basit (21), a resident of Pandeshwar, were arrested at Adyar.)

ಬಂಧಿತರ ವಶದಲ್ಲಿದ್ದ 3 ತಲವಾರುಗಳು, 2 ಚೂರಿ, 7 ಮೊಬೈಲ್ ಫೋನ್ ಗಳು, ಹಾಗೂ ಮಾರುತಿ ಒಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

CCB_AREST_FIVE_2a

ಆರೋಪಿಗಳೆಲ್ಲರೂ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಆರೋಪಿಗಳ ಪೈಕಿ ಜಿಯಾ @ ಎ.ಕೆ ರಿಯಾಸ್ ಎಂಬಾತನು ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರಿನಲ್ಲಿ 2014 ನೇ ಇಸವಿಯಲ್ಲಿ ಇಜಾಝ್ ಎಂಬಾತನ ಕೊಲೆ ಪ್ರಕರಣ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಒಟ್ಟು 12 ಪ್ರಕರಣಗಳು ದಾಖಲಾಗಿರುತ್ತದೆ.

ಸುಮಾರು ಒಂದು ತಿಂಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದನು. ಅಜ್ಮಲ್ @ ಅಜ್ಜು ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಇಜಾಝ್ ಎಂಬಾತನ ಕೊಲೆ ಪ್ರಕರಣ, ಬಂಟ್ವಾಳ ನಗರ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ಮುಸ್ತಾಕ್ ಅಹಮ್ಮದ್ ಹಾಗೂ ಮೊಹಮ್ಮದ್ ಫಝಲ್ ಎಂಬವರು ಇಜಾಝ್ ಎಂಬಾತನ ಕೊಲೆ ಯತ್ನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ. ಬಾಶಿತ್ ಎಂಬಾತನ ವಿರುದ್ದ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವೊಂದು ದಾಖಲಾಗಿರುತ್ತದೆ.

ಈ ಹಿಂದೆ 2011 ನೇ ಇಸವಿಯಲ್ಲಿ ಕಣ್ಣೂರಿನ ಅಬ್ದುಲ್ ರಹಿಮಾನ್ @ ಸಣ್ಣ ಪುತ್ತ ಎಂಬಾತನನ್ನು ಇಜಾಝ್ ಮತ್ತು ಇತರರು ಮಾಡಿದ್ದು, ಈ ಕೊಲೆಗೆ ಪ್ರತಿಕಾರವಾಗಿ 2014 ನೇ ಇಸವಿಯಲ್ಲಿ ಜಿಯಾ @ ಎ.ಕೆ ರಿಯಾಸ್, ಅಜ್ಮಲ್ @ ಅಜ್ಜು, ಮುಸ್ತಾಕ್ ಅಹಮ್ಮದ್, ಮೊಹಮ್ಮದ್ ಫಜಲ್ ಹಾಗೂ ಇತರರು ಸೇರಿ ಕೊಲೆ ನಡೆಸಿದ್ದು, ಆರೋಪಿಗಳು ಇದೇ ರೀತಿ ಯಾವುದೋ ದುಷ್ಕೃತ್ಯವನ್ನು ನಡೆಸಲು ಈ ರೀತಿ ಸಂಚು ರೂಪಿಸಿ ಮಾರಾಕಾಯುಧಗಳೊಂದಿಗೆ ತಿರುಗಾಡುತ್ತಿದ್ದರು ಎನ್ನಲಾಗಿದೆ.

ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ  ಡಾ. ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Write A Comment