ಕನ್ನಡ ವಾರ್ತೆಗಳು

ಗೃಹರಕ್ಷಕದಳದ ಘಟಕಾಧಿಕಾರಿಗಳ ಸಭೆಯಲ್ಲಿ ಬೀಳ್ಕೊಡುಗೆ ಸಮಾರಂಭ

Pinterest LinkedIn Tumblr

homeguard_send_off

ಮ೦ಗಳೂರು ಜ,29:  ದ.ಕ. ಜಿಲ್ಲಾ ಗೃಹರಕ್ಷಕದಳದ ಘಟಕಾಧಿಕಾರಿಗಳ ಸಭೆಯು ಜಿಲ್ಲಾ ಕಮಾಂಡೆಂಟ್ ಡಾ: ಮುರಲೀ ಮೋಹನ ಚೂಂತಾರು ಅಧ್ಯಕ್ಷತೆಯಲ್ಲಿ ನಡೆಯಿತು.

ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಅತೀ ಹೆಚ್ಚು ಗೃಹರಕ್ಷಕಸದಸ್ಯರುಗಳನ್ನು ನಿಯೋಜಿಸಲು ಸೂಚಿಸಲಾಯಿತು. ಹೊಸದಾಗಿ ಸೇರಿದ ಗೃಹರಕ್ಷಕರುಗಳಿಗೆ ಸಮಸವಸ್ತ್ರಗಳನ್ನು ನೀಡಿ ಅವರನ್ನು ಸರದಿಯ ಆಧಾರದ ಮೇಲೆ ನೇಮಿಸಲು ಘಟಕಾಧಿಕಾರಿಗಳಿಗೆ ಸೂಚಿಸಲಾಯಿತು.

ಗೃಹರಕ್ಷಕದಳದಲ್ಲಿ ಶ್ಲಾಘನೀಯ ಸೇವೆಯನ್ನು ಸಲ್ಲಿಸಿರುವ ಮೂಲ್ಕಿ ಗೃಹರಕ್ಷಕದಳದ ಘಟಕಾಧಿಕಾರಿ ಎಚ್. ಮನ್ಸೂರ್ ಅವರಿಗೆ ೨೦೧೬ ರ ಮುಖ್ಯಮಂತ್ರಿಗಳ ಬೆಳ್ಳಿ ಪದಕವನ್ನು ಲಭಿಸಿದ್ದು, ಅವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.

ಜ.30ರಂದು ನಿವೃತ್ತರಾಗಲಿರುವ ಡೆಪ್ಯೂಟಿ ಕಮಾಂಡೆಂಟ್, ವಿ. ಪುರುಷೋತ್ತಮ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಸಭೆಯಲ್ಲಿ ಸೆಕೆಂಡ್-ಇನ್-ಕಮಾಂಡ್, ಮೊಹಮ್ಮದ್ ಇಸ್ಮಾಯಿಲ್, ಉಪ ಸಮಾದೇಷ್ಟರಾದ ವಿ. ಪುರುಷೋತ್ತಮ ಮತ್ತು ಪ್ರಭಾರ ಉಪ ಸಮಾದೇಷ್ಟರಾದ ರಮೇಶ್ ಉಪಸ್ಥಿತರಿದ್ದರು.

Write A Comment