ಕನ್ನಡ ವಾರ್ತೆಗಳು

ಜ.30-31 ರಂದು ಬೀಚ್ ಉತ್ಸವ

Pinterest LinkedIn Tumblr

Beach_feast_photo

ಮ೦ಗಳೂರು, ಜ.29:  ಕರಾವಳಿ ಉತ್ಸವದ ಅಂಗವಾಗಿ ಬೀಚ್ ಉತ್ಸವ ಕಾರ್ಯಕ್ರಮವು ಜನವರಿ 30-31ರಂದು ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ.

ಜನವರಿ 30ರಂದು ಸಂಜೆ 5  ಗಂಟೆಗೆ ಬೀಚ್ ಉತ್ಸವ ಉದ್ಘಾಟನೆಗೊಳ್ಳಲಿದೆ. ಅಂದು ಸಂಜೆ ಜಿಲ್ಲೆಯ ಪ್ರತಿಭಾನ್ವಿತ ತಂಡಗಳಿಂದ ಡ್ಯಾನ್ಸ್ ಸ್ಪರ್ಧೆ, ಮ್ಯೂಸಿಕಲ್ ನೈಟ್, ಹಾಡುಗಾರಿಕೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 10 ಗಂಟೆಗೆ ಯಕ್ಷಗಾನ ನಡೆಯಲಿದೆ.

ಜನವರಿ 31ರಂದು ಸಂಜೆ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬೀಚ್ ಉತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿರುವ ಮಂಗಳೂರು ಸಹಾಯಕ ಆಯುಕ್ತರ ಪ್ರಕಟಣೆ ತಿಳಿಸಿದೆ.

Write A Comment