ಮಂಗಳೂರು,ಜ.29 : ತಿರುವನಂತಪುರದಲ್ಲಿ ನಡೆದ ಕೇರಳ ರಾಜ್ಯ ಮಟ್ಟದ 56ನೆಯ ಶಾಲಾ ಕಲೋತ್ಸವದಲ್ಲಿ ಮಂಗಲ್ಪಾಡಿ ಸರಕಾರಿ ಹಿರಿಮ ಮಾಧ್ಯಮಿಕ ಶಾಲೆಯ ಮಕ್ಕಳು ಮತ್ತೊಮ್ಮೆ ದಿಗ್ವಿಜಯ ಮಾಡಿದ್ದಾರೆ. ಒಂದೆರಡು ಜಿಲ್ಲೆಗಳು ಭಾಗವಹಿಸುವ ಯಕ್ಷಗಾನ ಸ್ಪರ್ಧೆಯಲ್ಲಿ ಕಳೆದ ವರ್ಷ ಹದಿನಾರು ತಂಡಗಳು ಭಾಗವಹಿಸಿದ್ದರೆ ಈ ಬಾರಿ ಹದಿನೆಂಟು ತಂಡಗಳು ಪೈಪೋಟಿ ನೀಡಿದ್ದರೂ ಮಂಗಲ್ಪಾಡಿಯ ಯುವ ಪ್ರತಿಭೆಗಳು ಅದ್ವಿತೀಯರೆನಿಸಿದ್ದಾರೆ.
ಚಿಪ್ಪಾರು ಹಿಂದು ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕ ಶೇಖರ ಶೆಟ್ಟಿ ಅವರ ತರಬೇತಿ ಪಡೆದು ಪ್ರದರ್ಶಿಸಲಾದ ಬಭ್ರುವಾಹನ ಕಾಳಗ ಪ್ರಸಂಗಕ್ಕೆ ಸ್ವತಃ ಶೇಖರ ಶೆಟ್ಟಿ ಅವರು ಭಾಗವತಿಕೆ ಮಾಡಿದರು. ಚೇವಾರು ಶಂಕರ ಕಾಮತ್, ಶ್ರೀಧರ ಪಡ್ರೆ. ಸತೀಶ್ ಕುಮಾರ್ ಪುಣಿಂಚಿತ್ತಾಯ ಹಿಮ್ಮೇಳದಲ್ಲಿ ಸಹಕರಿಸಿದರು. ಬೇಕೂರು ಶಾಲಾ ಅಧ್ಯಾಪಕ ವಸಂತಕುಮಾರ್ ಚೇರಾಲು ಮತ್ತು ಗುರುಮೂರ್ತಿ ನಾಯ್ಕಾಪು ಮಾರ್ಗದರ್ಶನ ನೀಡಿದರು.