ಮಂಗಳೂರು : ಅಲ್ಕೋಹಾಲ್ ಸೇವನೆ ಮಾಡಿ ಲಾರಿ ಓಡಿಸಿದ ಚಾಲಕನೋರ್ವ ಕುಡಿತದ ಮತ್ತಿನಲ್ಲಿ ಲಾರಿಯನ್ನು ರಸ್ತೆ ವಿಭಾಜಕದ ಮೇಲೆ ಹತ್ತಿಸಿ ವಿದ್ಯುತ್ತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಮುಂಜಾನೆ ನಾಲ್ಕರ ಸುಮಾರಿಗೆ ನಗರದ ಎ.ಜೆ.ಆಸ್ಪತ್ರೆ ಸಮೀಪ ರಾಷ್ಟ್ರೀಯ ಹೆದ್ದಾರಿ (NH 66) ಯಲ್ಲಿ ನಡೆದಿದೆ.
ನಂತೂರು ಕಡೆಯಿಂದ ಕೊಟ್ಟಾರ ಚೌಕಿ ಕಡೆ ಸಾಗುತ್ತಿದ್ದ ಲಾರಿಯ ಚಾಲಕ ಕುಡಿದ ಮತ್ತಿನಲ್ಲಿ ಏಕ ಮುಖ (ಒನ್ ವೇ ರಸ್ತೆಯಲ್ಲಿ) ರಸ್ತೆಯಲ್ಲಿ ಲಾರಿ ಚಲಾಯಿಸಿ ಈ ಅಪಘಾತ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ಸ್ಥಳದಲ್ಲಿ ಸುಮಾರು ಒಂದು ಘಂಟೆಯಷ್ಟು ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಆಡಚಣೆಯುಂಟಾಯಿತು. ಬಳಿಕ ಸ್ಥಳಕ್ಕೆ ನಗರ ಸಂಚಾರಿ ಪೂಲಿಸರು ಆಗಮಿಸಿ ವಾಹನಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೂಟ್ಟರು.