
ಮ೦ಗಳೂರು ಜ.29: 108 ಅಂಬ್ಯುಲೆನ್ಸ್ ಚಾಲಕರು ಮುಷ್ಕರ ನಡೆಸುತ್ತಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 108 ಅಂಬ್ಯುಲೆನ್ಸ್‌ಗಳ ಸೇವೆಯಲ್ಲಿ ಯಾವುದೇ ಅಡಚಣೆ ಉಂಟಾಗಿರುವುದಿಲ್ಲ. ಕಳೆದ 24 ಗಂಟೆಗಳಲ್ಲಿ ಅಂಬ್ಯುಲೆನ್ಸ್ ಬೇಡಿಕೆಗಾಗಿ ಜಿಲ್ಲೆಯಲ್ಲಿ ಸುಮಾರು 28 ಕರೆಗಳಿಗೆ ಅಂಬ್ಯುಲೆನ್ಸ್ ಕಳುಹಿಸಲಾಗಿದೆ.
ಆರೋಗ್ಯ ಇಲಾಖೆಯ 24 ಹಾಗೂ ಕೆಎಸ್‌ಆರ್‌ಟಿಸಿಯ 13 ಚಾಲಕರನ್ನು 108 ಸೇವೆಗೆ ನಿಯೋಜಿಸಲಾಗಿದೆ. ಸಕಾಲಕ್ಕೆ 108 ಅಂಬ್ಯುಲೆನ್ಸ್ ಸೇವೆ ಸಾರ್ವಜನಿಕರಿಗೆ ಮುಂದುವರಿಯುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ.