ಮಂಗಳೂರು,ಜ.25: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಹತ್ವಾಕಾಂಕ್ಷೆ ಯೋಜನೆಯಾದ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟಿನ ತಯಾರಿಯು ಕಳೆದ 14 ತಿಂಗಳುಗಳಿಂದ ಪ್ರಗತಿಯಲ್ಲಿದ್ದು, ಅದರ ಪ್ರಥಮ ಕರಡು ಪ್ರತಿಯನ್ನು ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಮತ್ತು ರಿಜಿಸ್ಟ್ರಾರ್ ಉಮರಬ್ಬರವರಿಗೆ ಸಂಪಾದಕ ಪ್ರೊ| ಬಿ.ಎಂ. ಇಚ್ಲಂಗೋಡು, ಸಹ-ಸಂಪಾದಕರಾದ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಹಾಗೂ ಶ್ರೀಮತಿ ಝೊಹರಾ ಅಬ್ಬಾಸ್‌ರವರು ಅಕಾಡೆಮಿ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.
ಪ್ರೊ| ಬಿ.ಎ. ವಿವೇಕ ರೈ ನೇತೃತ್ವದ ಸಲಹಾ ಮಂಡಳಿಯ ಸಹಕಾರದೊಂದಿಗೆ ಸಾಕಷ್ಟು ಹೆಚ್ಚಿನ ಬ್ಯಾರಿ ಶಬ್ಧಗಳನ್ನು ಸಂಗ್ರಹಿಸಿ ಅದರ ಕನ್ನಡ ಹಾಗೂ ಇಂಗ್ಲಿಷ್ ಅರ್ಥಗಳೊಂದಿಗೆ ಕರಡು ಪ್ರತಿ ತಯಾರಿಸಲಾಗಿದ್ದು, 2016 ರ ಸೆಪ್ಟೆಂಬರ್ 30 ರ ಒಳಗೆ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟನ್ನು ಪ್ರಿಂಟಿಂಗ್‌ಗೆ ನೀಡಿ ನಂತರದ ಎರಡು ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಗೊಳಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಹಮೀದ್ ಪಡುಬಿದ್ರಿ, ಕೆ.ಇದಿನಬ್ಬ ಬ್ಯಾರಿ, ಯೂಸುಫ್ ವಕ್ತಾರ್, ಶ್ರೀಮತಿ ಎ.ಎ. ಆಯಿಶಾ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.