ಮಂಗಳೂರು,ಜ.25 : ಬೆಂಗಳೂರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ವಯೋಲಿನ್ (ಪಿಟೀಲು)ನಲ್ಲಿ ಕು. ಎಸ್. ಸುಪ್ರಭಾ ಕಲ್ಕೂರ ಉಡುಪಿ ಜಿಲ್ಲಾ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.
ಇವರು ಸಗರಿ ಪ್ರಸನ್ನ ಕಲ್ಕೂರ ಹಾಗೂ ಸುರೇಖಾ ಕಲ್ಕೂರರ ಮಗಳು ಹಾಗೂ ಖಣಜ.ಪ್ರೊ. ಶ್ರೀ ಮಂಜುನಾಥ ಕಲ್ಕೂರ ಮತ್ತು ಲಲಿತಾ ಕಲ್ಕೂರರ ಮೊಮ್ಮಗಳು. ಭರತಾಂಜಲಿ ಕಡಿಯಾಳಿ ವಿದ್ವಾನ್ ಶ್ರೀ ರವಿಕುಮಾರ್ ಮೈಸೂರು ಇವರ ಶಿಷ್ಯೆ, ವಿಧ್ಯೋದಯ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿನಿ.