ಕನ್ನಡ ವಾರ್ತೆಗಳು

ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ವರ್ಗಾವಣೆ : ರಾಜಕೀಯ ವ್ಯಕ್ತಿಗಳ ಕೈವಾಡ ಶಂಕೆ..!

Pinterest LinkedIn Tumblr

Pramod_Transefar

ಮಂಗಳೂರು : ಜಿಲ್ಲೆಯ ಇತಿಹಾಸದಲ್ಲೇ ಪೊಲೀಸ್ ಅಧಿಕಾರಿಯೋರ್ವರನ್ನು ಉಳಿಸಿಕೊಳ್ಳಲು ಪೊಲೀಸರೇ ಪ್ರತಿಭಟನೆ ನಡೆಸಿದ ಘಟನೆ ನಡೆದ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ಇದೀಗ ಚಾಮರಾಜ ನಗರದ ಡಿಸಿಆರ್‌ಬಿ (Daily crime report bureau) ವಿಭಾಗಕ್ಕೆ ವರ್ಗಾಯಿಸಲಾಗಿದೆ.

ಉಳಾಯಿಬೆಟ್ಟು ಪ್ರಕರಣದ ಆರೋಪಿಯನ್ನು ಬಂಧಿಸುವ ಮೂಲಕ ಜಿಲ್ಲೆಯ ಸಚಿವರ ಕೆಂಗಣ್ಣಿಗೆ ಬಲಿಯಾಗಿ ಬಳಿಕ ರಜೆಯಲ್ಲಿ ತೆರಳುವಂತೆ ಅದೇಶ ಪಡೆದ ಗ್ರಾಮಾಂತರ ಪೊಲೀಸ್ ಠಾಣೆಯ ನಿಷ್ಟಾವಂತಾ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ವರ್ಗಾಯಿಸ ಬಾರದು ಎಂದು ಠಾಣೆಯ ಪೊಲೀಸರು ಅಂದು ಪ್ರತಿಭಟನೆ ನಡೆಸಿದ್ದರು. ಇವರೊಂದಿಗೆ ಪ್ರತಿಭಟನೆಯಲ್ಲಿ ಕೆಲವು ಸಂಘಟನೆಯ ಮುಖಂಡರು, ಕಾರ್ಯಕರತರು ಕೂಡ ಕೈ ಜೋಡಿಸಿದ್ದರು.

ಬಳಿಕ ಮಂಗಳೂರು ನಗರ ಪೊಲೀಸ್ ಕಮೀಷನರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪ್ರಮೋದ್ ಕುಮಾರ್ ಅವರ ರಜೆಯನ್ನು ರದ್ದುಗೊಳಿಸುವ ಮೂಲಕ ಪ್ರಕರಣವನ್ನು ಬಗೆಹರಿಸಿದ್ದರು. ಇದೀಗ ಅದೇ ಪ್ರಕರಣವನ್ನು ಮುಂದಿಟ್ಟುಕೊಂಡು ಬೇರೆ ಕಾರಣ ನೀಡಿ ಪ್ರಮೋದ್ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ ಎನ್ನಲಾಗಿದೆ.

ತರಾತುರಿಯಲ್ಲಿ ನಡೆದ ಈ ವರ್ಗಾವಣೆಯಲ್ಲಿ ಉಳಾಯಿಬೆಟ್ಟು ಪ್ರಕರಣದ ಆರೋಪಿಯ ಬಂಧನವನ್ನು ವಿರೋಧಿಸಿ, ಆರೋಪಿಯ ಬಿಡುಗಡೆಗೆ ಒತ್ತಡ ತಂದಿದ್ದಾರೆ ಎನ್ನಲಾದ ಸುರತ್ಕಲ್ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಅವರ ಕೈವಾಡ ಇದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

Write A Comment