ಕನ್ನಡ ವಾರ್ತೆಗಳು

ಕೈ ಮುಗಿಯುತ್ತೇನೆ, ದಯವಿಟ್ಟು ಜೆಡಿಎಸ್ ಉಳಿಸಿ: ಕಾರ್ಯಕರ್ತರಿಗೆ ದೇವೇಗೌಡ ಮನವ

Pinterest LinkedIn Tumblr
Devegowda
ಬೆಂಗಳೂರು: ನಾನು  ಕೈಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಜೆಡಿಎಸ್ ಉಳಿಸಿಕೊಂಡು ಹೋಗಿ. ಪಕ್ಷ ಮತ್ತೆ ಅಧಿಕಾರಕ್ಕೆ ಬರುವವರೆಗೂ ಬದುಕಿರುತ್ತೇನೆ. ಆಗ ಇಡೀ ರಾಜ್ಯ ಸುತ್ತುತ್ತೇನೆ ಹೀಗೆ ಅತಿ ವಿನಮ್ರದಿಂದ ಬೇಡಿಕೊಂಡ ಮಾಜಿ ಪ್ರಧಾನಿ ದೇವೇಗೌಡರು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಉಪಚುನಾವಣೆ, ಜಿಪಂ, ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ 40 ಶಾಸಕರು ಇದ್ದಾರೆ. ಅವರಿಗೆಲ್ಲ ಏನಾಗಿದೆ? ನಮ್ಮ ಪಕ್ಷದಲ್ಲಿ ಇಬ್ರಾಹಿಂ, ಅಜೀಂ ಸೇರಿ ಅನೇಕ ಮುಸ್ಲಿಂ ನಾಯಕರು ಇದ್ದಾರೆ. ಎಲ್ಲರಿಗೂ ಅಧಿಕಾರ ಕೊಟ್ಟಿದ್ದೇನೆ. ಯಾವ ಮುಸ್ಲಿಮರಿಗೂ ಮೋಸ ಮಾಡಿಲ್ಲ ಎಂದರು.
ಚುನಾವಣೆಗೆ ಒಂದು ವಾರ ಇರುವಾಗ ಜಿಲ್ಲಾ, ತಾಲೂಕು ಅಧ್ಯಕ್ಷರನ್ನು ಬದಲು ಮಾಡಿ ಅಂತ ಯಾರೂ ಬರಬೇಡಿ. ಗಲಾಟೆ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ. ಹಾಗೇನಾದರು ಬಂದರೆ ಎಲ್ಲರನ್ನು ಪಕ್ಷದಿಂದ ತೆಗೆದು ಹಾಕಬೇಕಾಗುತ್ತದೆ. ಬೆಂಗಳೂರಿನಲ್ಲಿ ಕೂಡ ಸಮಸ್ಯೆ ಇದೆ. ಅದನ್ನು ನೋಡಿ ನನಗಂತೂ ಸಾಕಾಗಿ ಹೋಗಿದೆ. ನನಗೆ ಹುಚ್ಚು ಹಿಡಿದು ಪಕ್ಷ ಕಟ್ಟುತ್ತಿಲ್ಲ. ನೋವು ತಿಂದು ತಿಂದು ನನಗೆ ಬೇಸರವಾಗಿದೆ.
ಉಪಚುನಾವಣೆಗೆ ಸ್ಪರ್ಧಿಸಲು ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲ. ರಾಯಚೂರಿನಲ್ಲಿ ಇಬ್ಬರು ಶಾಸಕರು ಇದ್ದರೂ ಕೂಡ ದೇವದುರ್ಗದಲ್ಲಿ ಅಭ್ಯರ್ಥಿ ಸಿಗುತ್ತಿಲ್ಲ. ಹೆಬ್ಬಾಳದಲ್ಲಿ ಜಮೀರ್ ಯಾರ್ಯಾರನ್ನೋ ಕರೆದುಕೊಂಡು ಬರೋಕೆ ಪ್ರಯತ್ನಿಸಿದರೂ ಅದು ಆಗುತ್ತಿಲ್ಲ. ಯಾರಾದರೂ ಬಂದು ಬಿ ಫಾರಂ ತೆಗೆದುಕೊಂಡು ಹೋಗಿ ಪಕ್ಷದ ಮರ್ಯಾದೆ ಉಳಿಸಿ, ಆದರೆ ಅದು ಕೂಡ ಆಗಲಿಲ್ಲ. ಹಾಗಂತ ದಾರಿಯಲ್ಲಿ ಹೋಗೋರಿಗೆಲ್ಲ ಬಿಫಾರಂ ಕೋಡೆಕೆ ಆಗಲ್ಲ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ಚಿಪಂ, ತಾಪಂ, ಚುನಾವಣೆಯಲ್ಲಿ ಜನಸಂಪರ್ಕದಲ್ಲಿರುವ ಕಾರ್ಯಕರ್ತರನ್ನು ಗುರುತಿಸಿ, ಕಾರ್ಯಕರ್ತರನ್ನು ಲಘುವಾಗಿ ಕಾಣಬೇಡಿ. ನಾನು ದೇವೇಗೌಡರು ಇಬ್ಬರೇ ಚುನಾವಣೆ ನಡೆಸಲು ಸಾಧ್ಯವಿಲ್ಲ. ಎಲ್ಲ ಕಡೆಗೂ ಭೇಟಿ ಕೊಡೋಕೆ ಸಾಧ್ಯವಿಲ್ಲ. ನಮ್ಮಲ್ಲಿ ಕೆಲವರು ಅವರ ಭಾವನೆ ವ್ಯಕ್ತಪಡಿಸಿರಬಹುದು. ಹಾಗಂತ ಅವರ ವಿರುದ್ಧ ನಾವು ದ್ವೇಷ ಇಟ್ಟುಕೊಂಡಿಲ್ಲ. ನಮ್ಮ ಪಕ್ಷದ ನಾಯಕರು ಮೈ ಕೊಡವಿ ಹೊರಟರೆ ಗೆಲವು ಕಷ್ಟು ಅಲ್ಲ ಎಂದು ಅಭಿಪ್ರಾಯಪಟ್ಟರು.

1 Comment

  1. Elli Ulisodu Swamy JD(s)Na Neenu Nimma Makkalu Irotanaka.. Navenu Ulisodu Angu Ulisa Bekadre Zamir Ahmedravarannba Kelkolli Istu Dina Nim Paksha Uliyoke Beleyoke Avare Karana..

Write A Comment