ಕುಂದಾಪುರ: ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಕಾರ್ಯಕ್ರಮದ ವೇದಿಕೆಯಲ್ಲಿ ಸಾಧುಕೋಕಿಲ ಹಾಗೂ ಶೋಭಾ ಕರಂದ್ಲಾಜೆ ಅತಿಥಿಗಳಾಗಿದ್ದರು. ತನ್ನ ಮಾತಿನ ವೇಳೆ ಸಾಧುಕೋಕಿಲ ಬಗ್ಗೆ ಶೋಭ ಕರಂದ್ಲಾಜೆ ಹೇಳಿದ ಮಾತುಗಳ ವಿವರ ಇಲ್ಲಿದೆ ನೋಡಿ.
ಸಾಧುಕೋಕಿಲರು ನಿರ್ದೇಶಕ, ನಿರ್ಮಾಪಕ, ನಟ, ಬರಹಗಾರರು, ಹಾಡುಗಾರರು. ಹೀಗೆಯೇ ಬಹುಮುಖ ಪ್ರತಿಭೆಯ ವಿದ್ವತ್ ಸಾಧುಕೋಕಿಲರಂತಹ ಕನ್ನಡ ಕಲಾವಿದರಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಧುಕೋಕಿಲರಂತಹ ಯುವಕರು ಹೆಚ್ಚುಹೆಚ್ಚು ಬೆಳೆಯಬೇಕು. ಇವರಂತಹಾ ಪ್ರತಿಭೆಗಳು ಯುವಕರಿಗೆ ಮಾದರಿಯಾಗಬೇಕಿದೆ. ಅದಕ್ಕಾಗಿಯೇ ಸಾಧುಕೋಕಿಲರನ್ನು ಇಲ್ಲಿಗೆ ಆಯೋಜಕರು ಕರೆಸಿದ್ದಾರೆ. ಮೂರ್ತಿ ಚಿಕ್ಕದಾದದರೂ ಕೀರ್ತಿ ದೊಡ್ಡದಾಗಿ ಬೆಳೆಯಬೇಕು ಎಂದರು.
ತನ್ನ ಮಾತಿನ ವೇಳೆಯಲ್ಲಿ ಈ ವಿಚಾರವನ್ನು ನೆನೆಸಿಕೊಂಡ ಸಾಧು ಅವರು ಶೋಭಾ ಕರಂದ್ಲಾಜೆ ಅವರು ನನ್ನನ್ನುದ್ದೇಶಿಸಿ ಸಾಧುಕೋಕಿಲರಂತಹ ಯುವಕರು ಬೆಳೆಯಬೇಕೆಂದರು. ನನ್ನನ್ನು ಯುವಕನೆಂದು ಕರೆದಿದ್ದು ನನ್ನ ಹುಮ್ಮಸ್ಸನ್ನು ಹೆಚ್ಚಿಸಿದೆ. ಇನ್ನು 50 ವರ್ಷಗಳ ಕಾಲ ಕಾಮೆಡಿ ಮಾಡುವೆ ಎಂದರು.