ಉಳ್ಳಾಲ. ಜ, 23 : ಫ್ರೆಂಡ್ಸ್ ದೇರಳಕಟ್ಟೆ ವತಿಯಿಂದ ದಕ್ಷಿಣ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ 8ಅಡಿ ಎತ್ತರದ ದುಬೈ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟ ದೇರಳಕಟ್ಟೆ ಸಿಟಿ ಗ್ರೌಂಡ್‌ನಲ್ಲಿ ನಡೆಯಿತು.
ಪ್ರಥಮ ಬಹುಮಾನ ಪಡೆದ ಎನ್.ಎಫ್ ಮಂಚಿಲ ಮತ್ತು ದ್ವೀತಿಯ ಬಹುಮನ ಪಡೆದ ಒಶಿಯ್ಯಾನ್ ಪಂಡಿತ್ ಹೌಸ್ ತಂಡಗಳಿಗೆ ಸಚಿವ ಯು.ಟಿ ಖಾದರ್ ಟ್ರೋಫಿ ಪ್ರದಾನ ಮಾಡಿದರು.
ಬೆಳ್ಮ ಗ್ರಾ.ಪ ಅಧ್ಯಕ್ಷ ವಿಜಯ ಕೃಷ್ಣ ಪೂಜಾರಿ, ಉಪಧ್ಯಕ್ಷ ಬಿ.ಎಂ ಸತ್ತಾರ್, ಯುತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಜಿ.ಪ ಸದಸ್ಯ ಎನ್.ಎಸ್ ಕರೀಂ, ದೇರಳಕಟ್ಟೆ ವಿದ್ಯಾ ರತ್ನ ಶಾಲೆಯ ಅಡಳಿತ ನಿದೇರ್ಶಕ ರವೀಂದ್ರ ಕೆ. ಶೆಟ್ಟಿ ಉಳಿತೊಟ್ಟು, ಕಾಂಗ್ರೇಸ್ ಮುಖಂಡ ರವಿರಾಜ್ ಶೆಟ್ಟಿ, ಹಮೀದ್ ಹಯಾ, ಡಿ.ಫ್ ಫ್ರೆಂಡ್ಸ್‌ನ ಅಧ್ಯಕ್ಷ ಹನೀಫ್, ಉಪಾಧ್ಯಕ್ಷ ಹಮೀದ್, ಪಾರೂಕ್ ಹೊಸಂಗಡಿ, ಫ್ರೆಂಡ್ಸ್ ದೇರಳಕಟ್ಟೆಯ ಹಾರೀಸ್, ಆಶ್ರಫ್ ರೆಂಜಾಡಿ, ಇರ್ಫಾನ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.