ಕನ್ನಡ ವಾರ್ತೆಗಳು

ಕುದ್ರೋಳಿ ನಾರಾಯಣಗುರು ಕಾಲೇಜಿನ ರಜತ ಸಂಭ್ರಮ

Pinterest LinkedIn Tumblr

narayan_rajath_sambrma_3

ಮಂಗಳೂರು,ಜ.23: ವಿದ್ಯೆಯಿಂದ ಪ್ರತಿಯೊಬ್ಬ ಬಡವನು ಶ್ರೀಮಂತನಾಗಬಲ್ಲ, ಆರ್ಥಿಕವಾಗಿ ಹಿಂದುಳಿದ ಬಡಜನರನ್ನು ಸ್ವಾವಲಂಬಿಗಲಾಗಿ ಮಾಡಲು ದಿವಂಗತ ದಾಮೋದರ್ ಆರ್ ಸುವರ್ಣರು ಬ್ರಹ್ಮಶ್ರೀನಾರಾಯಣಗುರುಗಳ ತತ್ವದಂತೆ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗಾಗಿ ಅಂದು ಈ ಮಹಾವಿದ್ಯಾಲಯವನ್ನು ಕಟ್ಟಿದ್ದಾರೆ.ಇಂದು ಈ ವಿದ್ಯಾಸಂಸ್ಥೆಯಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಸ್ವಾವಲಂಬಿಗಲಾಗಿ ಬದುಕಿ ಒಳ್ಲೆಯ ಹೆಸರನ್ನು ಗಳಿಸಿದ್ದಾರೆ ಎಂದು ಕರ್ನಾಟಕ ಸರ್ಕಾರದ ಗ್ರಾಮೀನ ಅಭಿವೃದ್ದಿ ಸಚಿವರು ಆದ ವಿನಯಕುಮಾರ್ ಸೊರಕೆ ಹೇಳಿದರು.

ಅವರು ಕುದ್ರೋಳಿ ನಾರಾಯಣಗುರು ಕಾಲೇಜಿನ ರಜತ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಸಮಾರಂಭಕ್ಕೆ ಚಾಲನೆ ನೀಡಿ ಈ ಮಾತಾನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕುದ್ರೋಳಿ ನಾರಾಯಣಗುರು ಕಾಲೇಜಿನ ಅಧ್ಯಕ್ಷರು ಆದ ಶ್ರೀ ನವೀನ್ ಚಂದ್ರ ಡಿ ಸುವರ್ಣರು ಇತ್ತಿಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿದಕ್ಕೆ ಕೋಟ ಶ್ರೀನಿವಾಸ ಪೂಜಾರಿಯವರನ್ನು ಆಭಿನಂದಿಸಿ ಸನ್ಮಾನಿಸಿದರು.

ಕಾಲೇಜಿನ ಪ್ರಾರಂಭದಿಂದ ಇಂದಿನವರೆಗೆ ಕಾಲೇಜಿನ ಏಳಿಗೆಗಾಗಿ ಶ್ರಮಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ವಸಂತಕುಮಾರ್ ಅವರನ್ನು ರಜತ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಸನ್ಮಾನಿತರಾದ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ ಕಾಲೇಜಿನ ಪ್ರಗತಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕಾಲೆಜಿಗೆ ಶುಭಹಾರೈಸಿದರು

ಕಾರ್‍ಯಾಕ್ರಮದ ಮೊದಲು ಎಲ್ಲಾ ಉಪನ್ಯಾಸಕರು ರಜತ ಸಂಭ್ರಮದ ಸಮೂಹ ಗೀತೆಯನ್ನು ಹಾಡಿದರು ಪ್ರೋ. ಬಾಲಕ್ರಿಷ್ಣ ಗಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು ಕಾಲೇಜಿನ ಪ್ರಾಂಶುಪಾಲರು ಡಾ.ವಸಂತ ಕುಮಾರ ರಜತ ಸಂಭ್ರಮದ ವರದಿಯನ್ನು ಸಭೆಯ ಮುಂದಿಟ್ಟರು.

narayan_rajath_sambrma_1 narayan_rajath_sambrma_2

ಕನಿಷ್ಠ ಶುಲ್ಕದಲ್ಲಿ ಗರಿಷ್ಠ ಶಿಕ್ಷಣವನ್ನು ನೀಡುತ್ತಿರುವ ನಾರಾಯಣಗುರು ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಾಧನೆ ಶ್ಲಾಘನೀಯ. ಬಡ, ಹಿಂದುಳಿದ, ಕಲಿಕೆಯಲ್ಲಿ ಸಾಮಾನ್ಯ ಹಂತದಲ್ಲಿ ಬಂದಿರುವ ವಿದ್ಯಾರ್ಥಿಗಳನ್ನು ತಿದ್ದಿ-ತೊಡಿ ನಾರಾಯಣಗುರು ಕಾಲೇಜಿನ ವಿದ್ಯಾರ್ಥಿಗಳನ್ನು ಸಶಕ್ತವಾಗಿ ರೂಪಗೊಳಿಸಿ ಸಮಾಜಕ್ಕೆ ನೀಡುತ್ತಿರುವುದು ಇದೇ ವಿಶ್ವ ವಿದ್ಯಾನಿಲಯದ ಮೆಚ್ಚುಗೆಗೆ ಪಾತ್ರವಾಗಿದೆ. ನಾರಾಯಣಗುರುಗಳ ವಿಚಾರಧಾರೆಯನ್ನು ಅನುಷ್ಠಾನ ಮಾಡುತ್ತಿರುವ ಈ ಸಂಸ್ಥೆಯು ಇನ್ನಷ್ಟ್ಟು ಉಜ್ವಲವಾಗಿ ಬೆಳಗಲಿ ಎಂಬುದಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೋ.ಕೆ. ಭೈರಪ್ಪ ಅಭಿಪ್ರಾಯಪಟ್ಟರು.

ಅವರು ನಾರಾಯಣಗುರು ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ನಾರಾಯಣಗುರು ತತ್ವ ಆದರ್ಶಗಳೊಂದಿಗೆ ಮುನ್ನಡೆಯುತ್ತಿರುವ ಈ ವಿದ್ಯಾಸಂಸ್ಥೆಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬಿಲ್ಲವ ಸಂಘದ ಅಧ್ಯಕ್ಷಿನಿ , ಮಾಜಿ ಸಿಂಡಿಕೇಟ್ ಸದಸ್ಯರು ಆದ ಶ್ರೀಮತಿ ಸುಮಲತ ಎನ್ ಸುವರ್ಣ ಅವರು ನಾರಾಯಣಗುರು ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ನಾರಾಯಣಗುರು ಕಾಲೇಜು ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಈ ಶುಭ ಸಮಾರಂಭದಲ್ಲಿ ವಿದ್ಯಾ ಸಂಸ್ಥೆಗಳ ಅಧ್ಯಪಕ ವೃಂದದವರ ಸೇವೆಯನ್ನು ಶ್ಲಾಘಿಸಿದರು.

ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೋ. ಬಾಲಕೃಷ್ಣ ಗಟ್ಟಿ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ವಸಂತ್ ಕುಮಾರ್ ವಿದ್ಯಾ ಸಂಸ್ಥೆಗಳ ವರದಿಯನ್ನು ಓದಿದರು ಮತ್ತು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೌಸ್ತುಭ ವಂದಿಸಿದರು, ಕನ್ನಡ ಉಪನ್ಯಾಸಕರಾದ ಶ್ರೀ. ಕೇಶವ ಬಂಗೇರ ಕಾರ್‍ಯಕ್ರಮ ಸಂಯೋಜಿಸಿದರು.

Write A Comment