ಕಾಸರಗೋಡು,ಜ.22: ಅಕ್ರಮವಾಗಿ ಸಾಗಿಸುತ್ತಿದ್ದ ಹತ್ತು ಕಿಲೋ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಮಧೂರು ಶಿರಿಬಾಗಿನಿಂದ ಪೊಲೀಸರು ಬಂಧಿಸಿದ್ದು, ಒರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಧರ್ಮತ್ತಡ್ಕ ನಿವಾಸಿಗಳಾದ ಮುಹಮ್ಮದ್ ಬಾದ್ ಷಾ(20) ಮತ್ತು ರಫೀಕ್(19) ಎಂದು ಗುರುತಿಸಲಾಗಿದೆ..ಇವರಿಂದ ಬೈಕೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೈವಳಿಕ್ಜೆಯ ಅಝೀಝ್ ಪಾರಾರಿಯಾದ ಆರೋಪಿ ಎಂದು ಗುರುತಿಸಲಾಗಿದೆ. ಕಾಸರಗೋಡು ಪೊಲೀಸರು ಇಂದು ಬೆಳ್ಳಿಗೆ ಕಾರ್ಯಾಚರಣೆ ನಡೆಸಿ ಗಾಂಜಾ ಮತ್ತು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.