ಉಳ್ಳಾಲ, ಜ.21: ರೈಲ್ವೆ ಹಳಿಯಲ್ಲಿ ಛಿದ್ರಗೊಂಡಿರುವ ಮೃತ ದೇಹವೊಂದು ಪತ್ತೆಯಾಗಿರುವ ಘಟನೆ ಉಳ್ಳಾಲ ಒಳಗಿನ ಪೇಟೆಯಲ್ಲಿ ಇಂದು ಮುಂಜಾನೆ ನಡೆದಿದೆ. ಸುಮಾರು 40 ವರ್ಷದೊಳಗಿನ ಮಧ್ಯವಯಸ್ಕರ ಮೃತದೇಹ ಎಂದು ಗುರುತುಸಲಾಗಿದೆ.ದೇಹದಿಂದ ರುಡ ಬೇರ್ಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ.
ರುಂಡವು, ಮುಂಡದಿಂದ ಬೇರ್ಪಟ್ಟಿದ್ದು, ದೇಹದ ಭಾಗಶಃ ಛಿದ್ರಗೊಂಡಿರುವುದರಿಂದ ಮೃತರ ಗುರುತು ಪತ್ತೆಯಾಗಿಲ್ಲ. ಇದು ಸಹಜವಾಗಿ ರೈಲಿನಡಿಗೆ ಸಿಲುಕಿ ಮೃತಪಟ್ಟಿದೆಯೇ ಅಥವಾ ಅತ್ಮಹತ್ಯೆಯೇ ಎಂದು ಇನ್ನೂ ತಿಳಿದು ಬಂದಿಲ್ಲ.
ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಿರಿ….