
ಮ೦ಗಳೂರು ಜ.21 : ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಂಗಳೂರು ತಾಲೂಕು ಮಟ್ಟದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿಶೇಷ ಬೋಧನಾ ಕಾರ್ಯಕ್ರಮವನ್ನು ಇತ್ತೀಚೆಗೆ ಬಾಲಕರ ವಿದ್ಯಾರ್ಥಿನಿಲಯ ಅಶೋಕನಗರದಲ್ಲಿ ಹಮ್ಮಿಕೊಳ್ಳಲಾಯಿತು.
ತಾಲೂಕು ಹಿಂದುಳಿದ ವರ್ಗಗಳ ವಿಸ್ತ್ರರಣಾಧಿಕಾರಿ ಸುಂದರ ನಾಯ್ಕ್ ಪಿ. ಕಾರ್ಯಕ್ರಮ ಉದ್ಘಾಟಿಸಿ, ಇಲಾಖಾ ಯೋಜನೆಗಳ ಬಗ್ಗೆ ಮತ್ತು ಇಲಾಖೆಯಿಂದ ಹಿಂದುಳಿದ ವರ್ಗದ ಜನಾಂಗದ ಮಕ್ಕಳಿಗೆ ಸಿಗುವಂತಹ ಸೌಲಭ್ಯಗಳನ್ನು ವಿವರಿಸಿ ವಿದ್ಯಾರ್ಥಿಗಳು ಸರಕಾರದಿಂದ ಉಚಿತವಾಗಿ ನೀಡುವಂತಹ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತನ್ನ ಜೀವನವನ್ನು ತಾವೇ ನಿರೂಪಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ಅಧ್ಯಾಪಕರಾಗಿ ಪ್ರಕಾಶ್ ರಾವ್ (ವಿಜ್ಞಾನ), ಸುಧಾಕರ್ (ಗಣಿತ) ಮತ್ತು ಮುಕುಂದ ರಾಜ್ (ಇಂಗ್ಲೀಷ್) ಇವರುಗಳು ಎರಡು ದಿನಗಳ ಕಾಲ ಉಚಿತವಾಗಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಿದರು. ವಾರ್ಡನ್ ಹೇಮಂತ್ ಕುಮಾರ್ ಸ್ವಾಗತಿಸಿ, ದಯಾನಂದ ವಂದಿಸಿದರು. ತಾಲೂಕಿನ ಎಲ್ಲಾ ವಿದ್ಯಾರ್ಥಿ ನಿಲಯಗಳ ನಿಲಯ ಪಾಲಕರು ಹಾಗೂ ನಿಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.