ಮಂಗಳೂರು,ಜ.19: ಹೈದರಾಬಾದ್‌ನ ಕೇಂದ್ರಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ದಲಿತ ಮುಖಂಡ ವೆಮುಲ ರೋಹಿತ್‌ನ ಬಲವಂತದ ಸಾವಿಗೆ ಕಾರಣರಾದ ಎಬಿವಿಪಿಯ ಗೂಂಡಾ ಪ್ರವೃತಿಯನ್ನು ಡಿವೈಎಫ್‌ಐ, ಎಸ್‌ಎಫ್‌ಐ, ದ.ಕ. ಜಿಲ್ಲಾ ಸಮಿತಿ ಖಂಡಿಸಿದೆ. ಹಾಗೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.
ವಿಶ್ವವಿದ್ಯಾಲಯದಲ್ಲಿ ಹಲವು ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಜನಪರ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ದಲಿತ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿ, ಜಾತ್ಯತೀತ ಜನಪರ ಸಂಘಟನೆಯಲ್ಲಿ ನ್ಯಾಯಕತ್ವ ವಹಿಸಿರುವುದನ್ನೇ ಮುಖ್ಯ ಉದ್ದೇಶವಾಗಿಟ್ಟು ಕೊಂಡು ವಿನಾ ಕಾರಣ ವಿದ್ಯಾರ್ಥಿ ರೋಹಿತ್ ಸೇರಿ ಐವರು ದಲಿತ ಸಂಶೋಧನ ವಿದ್ಯಾರ್ಥಿಗಳನ್ನು ಹಾಸ್ಟೆಲಿನಿಂದ ಅಮಾನತು ಮಾಡುವಲ್ಲಿ ಎಬಿವಿಪಿ ಸಂಘಟನೆ ಮಾಡಿರುವಂತಹ ವಿವಾದವೇ ರೋಹಿತ್‌ನನ್ನು ಆತ್ಮಹತ್ಯೆಗೆ ಪ್ರಚೋದಿಸಲು ಕಾರಣವಾಗಿದೆ.
ಈ ಹಿನ್ನಲೆಯಲ್ಲಿ ಶಿಕ್ಷಣದ ಹಕ್ಕು ನಿರಾಕರಿಸುವ ಸ್ವಾಭಿಮಾನದ ಬದುಕಿಗೆ ಅಡ್ಡಿ ಪಡಿಸುವ ವ್ಯವಸ್ಥೆಯ ವಿರುದ್ಧ, ವಿದ್ಯಾರ್ಥಿ ರೋಹಿತ್‌ನ ಬಲವಂತದ ಸಾವಿಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಡಿವೈಎಫ್‌ಐ, ಎಸ್‌ಎಫ್‌ಐ, ದಲಿತ ಹಕ್ಕುಗಳ ಸಮಿತಿ, ಹಲವು ಜನಪರ ಸಂಘಟನೆಗಳು ಒಟ್ಟು ಸೇರಿ ನಾಳೆ ಜ.೨೦ಕ್ಕೆ ಬೆಳ್ಳಗೆ ೧೦.೦೦ಗೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್‌ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.