ಉಡುಪಿ: ಪೇಜಾವರ ಶ್ರೀಗಳ ಪರ್ಯಾಯದಲ್ಲಿ ಭಾಗವಹಿಸುತ್ತೇನೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಪಂಚಮ ಪರ್ಯಾಯ ಐತಿಹಾಸಿಕ ಕಾರ್ಯಕ್ರಮವಾಗಿದ್ದು ವಿಶ್ವೇಶತೀರ್ಥರು ಭೇಟಿಯಾಗಿ ನನ್ನನ್ನು ಆಮಂತ್ರಿಸಿದ್ದಾರೆ, ಸಮುದ್ರೋಲ್ಲಂಘನೆಗೂ ಸಮಾರಂಭಕ್ಕೂ ಸಂಬಂಧವಿಲ್ಲ. ಪರ್ಯಾಯ ಮೆರವಣಿಗೆ, ದರ್ಬಾರಿನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಅವರು ಉಡುಪಿಯಲ್ಲಿ ತಿಳಿಸಿದ್ದಾರೆ.
ಹಿಂದೂ ಸಮಾಜದ ಏಕತೆ ಮುಖ್ಯವಾಗಿದೆ. ಪುತ್ತಿಗೆ ಮಠದ ಕಡೆಯಿಂದ ಪೇಜಾವರಶ್ರೀಗೆ ಬಿರುದು ನೀಡಲಿದ್ದು ಪರ್ಯಾಯ ದರ್ಬಾರಿನಲ್ಲಿ ಬಿರುದು ಸಮರ್ಪಣೆ
ಮಾಡಲಿದ್ದೇವೆ. ‘ಅಭಿನವ ಶ್ರೀ ಸುಧೀಂದ್ರ ತೀರ್ಥ’ ಎಂಬ ಬಿರುದುನೀಡಿ ಕನಕಾಭಿಷೇಕ ರಜತರಥ ನೀಡಿ ಸನ್ಮಾನಿಸುತ್ತೇವೆ ಎಂದರು.