ಕನ್ನಡ ವಾರ್ತೆಗಳು

ಎನ್‌ಟಿ‌ಎಫ್‌ಐ ಲರ್ನಿಂಗ್ ಟಾಕೀಸ್ ತರಬೇತಿ

Pinterest LinkedIn Tumblr

tulu_film_talkins

ಮ೦ಗಳೂರು ಡಿ.24:  ಫೇಸ್ ಬುಕ್ ಪೇಜ್ ಮೂಲಕ ಈಗಾಗಲೇ ಸಿನಿಮಾ ತಯಾರಿಕೆ, ನಟನೆ ಮತ್ತು ತಾಂತ್ರಿಕತೆಯ ಬಗ್ಗೆ ಆಸಕ್ತರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿರುವ `ನಮ್ಮ ತುಳು ಫಿಲ್ಮ್ ಇಂಡಸ್ಟ್ರಿ’ ಮಂಗಳೂರಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಆಂಬಿಟ್ ಆಕ್ಟಿಂಗ್ ಕ್ಲಾಸ್ ಸಹಯೋಗದೊಂದಿಗೆ ಮೊದಲ ಬಾರಿಗೆ ಇದೇ ಡಿಸೆಂಬರ್ 25 ರಿಂದ 27ರ ವರೆಗೆ ಮೂರು ದಿನಗಳ `ಲರ್ನಿಂಗ್ ಟಾಕೀಸ್’ ಎಂಬ ತರಬೇತಿ ಕಾರ್ಯಕ್ರಮ ವನ್ನು ಸಿರಿಚಾವಡಿ, ತುಳುಭವನ, ಉರ್ವಸ್ಟೋರ್ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ನಟನೆ, ಫಿಲ್ಮ್ ಮೇಕಿಂಗ್ ವಿವಿಧ ವಿಭಾಗಗಳ ಬಗ್ಗೆ ಈ ಮೂರು ದಿನಗಳ ಶಿಬಿರದಲ್ಲಿ ಮಾಹಿತಿ ನೀಡಲಾಗುವುದು. ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಬಯಸುವ ಆಸಕ್ತರಿಗೆ ಈ ಲರ್ನಿಂಗ್ ಟಾಕೀಸ್ ಸಹಾಯಕವಾಗಲಿದೆ. ಶಿಬಿರದಲ್ಲಿ ನಟನಾ ಕೌಶಲ್ಯ, ನಿರ್ದೇಶನ, ಸಿನಿಮಾಟೋಗ್ರಫಿ, ವಿ‌ಆಫ್ಕ್ಸ್, ಎಡಿಟಿಂಗ್, ಫಿಲ್ಮ್ ಪ್ರೊಜೆ ಕ್ಷನ್ ಮತ್ತು ಅದಕ್ಕೆ ಸಂಬಂಧಪಟ್ಟ ಚರ್ಚೆ, ಮಾಹಿತಿಗಳು, ಅನುಭವಿ ತಂತ್ರಜ್ಞರಿಂದ ಸೂಕ್ತ ಸಲಹೆ , ಮಾರ್ಗದರ್ಶನ, ಕೋಸ್ಟಲ್ ವುಡ್ ಮತ್ತು ಸ್ಯಾಂಡಲ್ ವುಡ್ ನ ಪರಿಣತರಿಂದ ಅತಿಥಿ ಉಪನ್ಯಾಸಗಳು ಇವೆ. ಮೂರು ದಿನಗಳ ಶಿಬಿರಕ್ಕೆ ರೂ. 350 ಶಿಬಿರ ಶುಲ್ಕವಿದೆ.

ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಚಿತ್ರ ನಿರ್ಮಾಪಕರಾದ ಶ್ರೀ ಕಿಶೋರ್ ಡಿ. ಶೆಟ್ಟಿ, ವಹಿಸಲಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತರು LT <NAME> TO 56060 SMS ಮಾಡಿ ನೋಂದಾಯಿಸಿಕೊಳ್ಳಬಹುದು ಅಥವಾ ಕರೋಪಾಡಿ ಅಕ್ಷಯ್ ನಾಯಕ್ – 9449323495 ಇವರನ್ನು ಸಂಪರ್ಕಿಸಬಹುದು ಎಂದು ಸಂಘಟಕರ ಪರವಾಗಿ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment