ಉಳ್ಳಾಲ,ಡಿ.24: ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್(ಸ.ಅ) ರವರ ಜನ್ಮ ದಿನಾಚರನೆ ಪಯುಕ್ತ ಉಳ್ಳಾಲ ಜುಮಾ ಮಸೀದಿ ಮತ್ತು ದರ್ಗಾ ಸಮಿತಿ, ಸಯ್ಯಿದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್(ರಿ) ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಉಳ್ಳಾಲದಲ್ಲಿ ಬ್ರಹತ್ ಸ್ವಲಾತ್ ಮೆರವಣೆಗೆ ಜರುಗಿತು, ಕಾರ್ಯಕ್ರಮವನ್ನು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಜನಾಬ್ ಯು.ಎಸ್ ಹಂಝರವರು ಉಳ್ಳಾಲ ಜುಮ್ಮಾ ಮಸೀದಿಯ ವಠಾರದಲ್ಲಿ ದ್ವಜಾರೋಹಣ ಗೈದು ಉದ್ಘಾಟಿಸಿದರು.
ಖತೀಬರಾದ ಹಾಜಿ ಅಬ್ದುಲ್ ರವೂಫ್ ಮುಸ್ಲಿಯಾರ್ ರವರು ದರ್ಗಾ ಝಿಯಾರತ್‌ಗೈದು ದುಆಗೈದರು. ಮೀಲಾದ್ ಪ್ರಯುಕ್ತ ಬೃಹತ್ ಸ್ವಲಾತ್ ಮೆರವಣಿಗೆ ಜರುಗಿತು. ಕೋಟೆಪುರ ಜುಮಾ ಮಸೀದಿಯಿ೦ದ ಹೊರಟು ಕೋಡಿ, ಉಳ್ಳಾಲ ಪೇಟೆಯಾಗಿ ಮುಕ್ಕಚೇರಿ ಆಜಾದ್ ನಗರ, ಮೇಲಂಗಡಿ ಮಾರ್ಗವಾಗಿ ದರ್ಗಾ ವಠಾರದಲ್ಲಿ ಕೊನೆಗೊಂಡಿತು. ದರ್ಗಾ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝ ಮತ್ತು ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ವೇ, ನಾಡಿನ ಸರ್ವ ಧರ್ಮ ಸಮುದಾಯ ಕ್ಕೆ ಈದ್ ಮಿಲಾದ್ ಸಂದೇಶವನ್ನು ಸಾರಿದರು.
ಮೆರವಣಿಗೆಯಲ್ಲಿ ಆರೋಗ್ಯ ಸಚಿವರಾದ ಯು.ಟಿ ಖಾದರ್, ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಅಲ್-ಹಾಜಿ ಯು.ಎಸ್ ಹಂಝ, ಉಪಾಧ್ಯಕ್ಶರಾದ ಅಶ್ರಫ್ ಅಹ್ಮದ್ ರೈಟ್ವೇ, ಪ್ರಧಾನ ಕಾರ್ಯದರ್ಶಿ ಯು.ಟಿ ಇಲ್ಯಾಸ್, ಜತೆ ಕಾರ್ಯದರ್ಶಿ ಮೊಹಮ್ಮದ್ ಅಶ್ರಫ್ ಹಾಜಿ, ಫಾರೂಕ್ ಮಾರ್ಗತಲೆ, ಕೋಶಾಧಿಕಾರಿ ಮೊಹಮ್ಮದ್ ಹಾಜಿ, ಅಡಿಟರ್ ಜೆ. ಅಬ್ದುಲ್ ಹಮೀದ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಸಯ್ಯಿದ್ ಝಿಯಾದ್ ತಂಙಳ್, ಕೋಶಾಧಿಕಾರಿ ಯು.ಟಿ ತಂಝೀಲ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಬಿ.ಜಿ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಮ್, ಜತೆ ಕಾರ್ಯದರ್ಶಿ ಫಾರೂಕ್ ಕೋಡಿ, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷರಾದ ಬಾವಾಕ, ಮುಫತ್ತಿಶ್ ಸುಲೈಮಾನ್ ಸಖಾಫಿ, ದಅವಾ ಕಾಲೇಜು ಪ್ರಾಂಶುಪಾಲರಾದ ಕಲಾಂ ಸಖಾಫಿ, ಹಿಫುಲ್ ಕುರಾನ್ ಕಾಲೇಜು ಪ್ರಾಂಶುಪಾಲರಾದ ಅಬ್ದುಲ್ ರಹ್ಮಾನ್ ಸಖಾಫಿ, ಸಯ್ಯಿದ್ ಮದನಿ ದರ್ಗಾ ಸಮಿತಿ, ಅರಬಿಕ್ ಟ್ರಸ್ಟ್(ರಿ), ಚಾರಿಟೇಬಲ್ ಟ್ರಸ್ಟ್(ರಿ), ಸದಸ್ಯರು, ೩೨ ಮದ್ರಸ ವಿದ್ಯಾರ್ಥಿಗಳು, ಮದ್ರಸದ ಅಧ್ಯಾಪಕರು, ೩೨ ಮೊಹಲ್ಲಾ ನಾಗರಿಕರು, ಊರಿನ ಅನೇಕ ಗಣ್ಯ ವ್ಯಕ್ತಿಗಳು, ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿದರು.