
ಸುಳ್ಯ, ಡಿ.22: ಆರರ ಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಹೇಯ ಘಟನೆ ಕುಕ್ಕುಜಡ್ಕ ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಡ್ಯಾರು ಪದವು ನಿವಾಸಿ ಸತೀಶ್ (25) ಬಂಧಿತ ಆರೋಪಿ.
ಈತ ಭಾನುವಾರ ಕಾರ್ಯನಿಮಿತ್ತ ಕುಕ್ಕುಜಡ್ಕಕ್ಕೆ ಬಂದಿದ್ದು ಅಲ್ಲಿ ಅಕ್ಕಪಕ್ಕದ ಮನೆಗಳ ಮಕ್ಕಳೊಂದಿಗೆ ಆಟವಾಡುತ್ತಿದ್ದ ಆರರ ಹರೆಯದ ಬಾಲಕಿಯನ್ನು ಪುಸಲಾಯಿಸಿ ಪಕ್ಕಕ್ಕೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದ. ಈ ವೇಳೆ ಬಾಲಕಿಯ ಮನೆಯವರು ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.
ಬಾಲಕಿಯಿಂದ ವಿಷಯ ತಿಳಿದ ಮನೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಸುಳ್ಯ ಪೊಲೀಸರು ಆರೋಪಿ ಸತೀಶನನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.