ಕನ್ನಡ ವಾರ್ತೆಗಳು

ಮೆಲ್ಕಾರ್ ಜಂಕ್ಷನ್‌ಗೆ ರಾ.ಹೆ ಕಾರ್ಯನಿರ್ವಾಹಕ ಇಂಜಿನಿಯರ್ ದಿಢೀರ್ ಭೇಟಿ.

Pinterest LinkedIn Tumblr

Bantwl_taffc_photo

ಬಂಟ್ವಾಳ, ಡಿ. 22: ರಸ್ತೆ ಅಗಲೀಕರಣಗೊಂಡು ಧೂಳಿನಿಂದ ಕೂಡಿದ್ದ ಮೆಲ್ಕಾರ್ ಜಂಕ್ಷನ್‌ಗೆ ರಾ.ಹೆ. ಕಾರ್ಯನಿರ್ವಾಹಕ ಅಭಿಯಂತರ ರು ನಿನ್ನೆ ದಿಢೀರ್ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು, ಜನರ ಬೇಡಿಕೆಗಳನ್ನು ಅವಲೋಕಿಸಿದರು.

ಮೆಲ್ಕಾರ್ ರಸ್ತೆ ಅಗಲೀಕರಣದ ರೂವಾರಿ, ಟ್ರಾಫಿಕ್ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ್‌ಯ್ಯ ಅವರು ಅಗಲೀಕರಣವಾದ ಸ್ಥಳಕ್ಕೆ ಧೂಳಿನಿಂದ ಮುಕ್ತಿ ಸಿಗಲು ಡಾಮರೀಕರಣ ಮಾಡಿಕೊಡುವಂತೆ ಮತ್ತು ಜನರು ರಸ್ತೆ ದಾಟಲು ತೀರಾ ಕಷ್ಟವಾಗುತ್ತಿರುವುದರಿಂದ ಜೀಬ್ರಾ ಲೈನ್ ಅಳವಡಿಸುವಂತೆ ಸಾರ್ವಜನಿಕರ ಪರವಾಗಿ ಮನವಿಯನ್ನು ನೀಡಿದರು. ಮನವಿಯನ್ನು ಸ್ವೀಕರಿಸಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ರಮೇಶ್, ಎ.ಇ ಅನ್ಸರ್, ಎ.ಇ.ಇ. ರಹೀಮಾನ್ ಅವರು ಒಂದು ವಾರದೊಳಗೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು.

ಕಾಮಗಾರಿಗೆ ಅಡ್ಡಿಯಾಗುತ್ತಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಈಗಾಗಲೇ ಮೆಸ್ಕಾಂ ಇಲಾಖೆಗೆ ಹಾಗೂ ಸುಸಜ್ಜಿತ ಬಸ್ ನಿಲ್ದಾಣದ ಜೊತೆ ಮೂರು ಸಾರ್ವಜನಿಕ ಶೌಚಾಲಯಗಳನ್ನು ಹಾಗೂ ಕಸದ ತೊಟ್ಟಿಯನ್ನು ನೀಡಬೇಕೆಂದು ಪುರಸಭೆಗೂ ಮನವಿ ನೀಡಲಾಗಿದೆ ಎಂದು ಚಂದ್ರಶೇಖರಯ್ಯ ತಿಳಿಸಿದರು.

ಸಿಬಂದಿಗಳಾದ ಕೃಷ್ಣ ನ್ಯಾಕ್, ಕುಟ್ಟಿ, ಮನೋಹರ, ಹರೀಶ್ ಭಟ್, ಗಣೇಶ್ ಮತ್ತಿರರು ಉಪಸ್ಥಿತರಿದ್ದರು.

Write A Comment