ಕನ್ನಡ ವಾರ್ತೆಗಳು

ಅಡ್ಯಾರ್ : ಮಕ್ಕಳಿಂದ ಸ್ವಚ್ಛತಾ ಜಾಗೃತಿ ಅಭಿಯಾನ.

Pinterest LinkedIn Tumblr

Swchath_abhiyan_photo_1

ಮಂಗಳೂರು,ಡಿ.12: ಅಡ್ಯಾರ್ ನಲ್ಲಿರುವ “ದಿ ಕೇಂಬ್ರಿಡ್ಜ್ ಇಂಟರ್ ನ್ಯಾಶನಲ್ ಸ್ಕೂಲ್” ನ ಮಕ್ಕಳು ತಮ್ಮ ಶಾಲೆಯ ಯೋಜನಾ ವರದಿಯ ಶುಕ್ರವಾರದಂದು ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ” ಸ್ವಚ್ಛತಾ ಜಾಗೃತಿ ಅಭಿಯಾನ” ಕಾರ್ಯಕ್ರಮ ನಡೆಸಿದ್ದರು.

ತ್ಯಾಜ್ಯ ಸಂಗ್ರಹಣಾ ವಾಹನ, ಕಸದ ತೊಟ್ಟಿ ಇಲ್ಲದ ಕಾರಣ ಮನೆಯ ಮುಂದೆ ರಾಶಿ ಹಾಕಿದ ತ್ಯಾಜ್ಯದಿಂದ ದುರ್ವಾಸನೆ ಬರುತ್ತಿರುವ ವಿಷಯ ಸಾರ್ವಜನಿಕರಿಂದ ತಿಳಿದು ಬಂದಿದೆ. ಈ ವಿಷಯದ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿದ ನಂತರ ಶಾಲೆಯ ಪ್ರಾಂಶುಪಾಲರಾದ ಡಾ. ಕುಸುಮ್ ರವರು ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಅಡ್ಯಾರ್ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಹಾರ ಕೋರಿ ವಿನಂತಿ ಪತ್ರ ನೀಡಿದರು.

Swchath_abhiyan_photo_3 Swchath_abhiyan_photo_2

ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪ್ರತಿಮರವರು ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಹಾಗೂ ಮುಂದಿನ ಹಂತದಲ್ಲಿ ಪಂಚಾಯಿತಿ ವತಿಯಿಂದ ಮಿಶ್ರ ಗೊಬ್ಬರ ತೊಟ್ಟಿಯನ್ನು ದಿ ಕೇಂಬ್ರಿಡ್ಜ್ ಇಂಟರ್ ನ್ಯಾಶನಲ್ ಸ್ಕೂಲ್ ಗೆ ಕೊಡುವುದಾಗಿ ಭರವಸೆ ನೀಡಿದರು.

ಶಾಲೆಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ತ್ಯಾಜ್ಯ ವಿಲೇವಾರಿಯ ಬಗ್ಗೆ ಪ್ರಾತ್ಯಕ್ಷಿತ ತರಭೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿಯೂ ತಿಳಿಸಿದ್ದಾರೆ. ಶಾಲಾ ಶಿಕ್ಷಕರಾದ ಶ್ರೀಮತಿ ಹೇಮಲತಾ ಈ ಕಾರ್ಯಕ್ರಮದ ಸಂಚಾಲಕರಾಗಿದ್ದು, ಶ್ರೀಮತಿ ಶಾಲಿನಿ ಸಹಭಾಗಿಯಾಗಿದ್ದಾರೆ.

Write A Comment