
ಮಂಗಳೂರು: ಐಷಾರಾಮಿ ಪ್ರವಾಸಿ ನೌಕೆ ಎಂವಿ ಐಡಾ ಓರಾ ಬುಧವಾರ ನಗರದ ಎನ್ಎಂಪಿಟಿ ಬಂದರಿಗೆ ಆಗಮಿಸಿತು. ಒಟ್ಟು 1145 ಪ್ರವಾಸಿಗರು ಮತ್ತು 411 ಸಿಬ್ಬಂದಿ ವರ್ಗದವರು ಈ ಹಡಗಿನಲ್ಲಿದ್ದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎನ್ಎಂಪಿಟಿ ಬಂದರಿಗೆ ಆಗಮಿಸಿರುವ 10ನೇ ಐಷಾರಾಮಿ ಪ್ರವಾಸಿ ನೌಕೆ ಇದಾಗಿದೆ.
ಐಷಾರಾಮಿ ಪ್ರವಾಸಿ ನೌಕೆಯಲ್ಲಿ ಮಂಗಳೂರಿಗೆ ಆಗಮಿಸಿದ ವಿದೇಶಿ ಪ್ರವಾಸಿಗರು ಬಳಿಕ ನಗರದ ವಿವಿಧ ಪ್ರೆಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದರು.