ಮಂಗಳೂರು, ಡಿ.09 : ದ.ಕ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಧಾರ್ ನೋಂದಣಿ ಮಾಡಿಸುವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 1,15,000 ವಿದ್ಯಾರ್ಥಿಗಳು ಆಧಾರ್ ನೋಂದಣಿ ಮಾಡಿಸದೆ ಇರುವುದನ್ನು ಗಮನಿಸಿ ಸರಕಾರ ಶಾಲೆಗಳಲ್ಲಿ ವಿಶೇಷ ಅಭಿಯಾನಕ್ಕೆ ಮುಂದಾಗಿದೆ.
ಮಂಗಳೂರು ತಾಲೂಕಿನ ಮಂಗಳೂರು ಎ, ಮುಲ್ಕಿ, ಬಂಟ್ವಾಳ ಮತ್ತು ವಿಟ್ಲ, ಪುತ್ತೂರು, ಉಪ್ಪಿನಂಗಡಿ, ಸುಳ್ಯ ತಾಲೂಕಿನ ಪಂಜ. ಬೆಳ್ತಂಗಡಿ ತಾಲೂಕಿನ ವೇಣೂರು ಮತ್ತು ಕೊಕ್ಕಡ, ಮೂಡುಬಿದಿರೆ ಮತ್ತು ಕಡಬ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿರುವ ಆಧಾರ್ ಕಿಟ್ ಗಳನ್ನು ಈ ಅಭಿಯಾನಕ್ಕೆ ನಿಯೋಜಿಸಲಾಗಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಆಧಾರ್ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
