ಕನ್ನಡ ವಾರ್ತೆಗಳು

ಅಪರಾಧತಡೆ ಬಗ್ಗೆ ಜನಜಾಗ್ರತಿ ಉದ್ದೇಶ; ಕುಂದಾಪುರದಲ್ಲಿ ತಿಂಗಳುಗಳ ಕಾಲ ಸಂಚರಿಸಲಿದೆ ಸುರಕ್ಷಾ ರಥ

Pinterest LinkedIn Tumblr

ಕುಂದಾಪುರ: ಅಪರಾಧ ಚಟುವಟಿಕೆಗಳ ತಡೆ ಹಾಗೂ ಜನರಲ್ಲಿ ಮಾಹಿತಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಸುರಕ್ಷಾ ರಥವು ಡಿಸೆಂಬರ್ ಅಂತ್ಯದವರೆಗೂ ಕುಂದಾಪುರ ಉಪವಿಭಾಗದ ವಿವಿಧ ವ್ಯಾಪ್ತಿಯಲ್ಲಿ ಸಂಚರಿಸಲಿದೆ.

Kndpr_Police_suraksha ratha (1)

Kndpr_Police_suraksha ratha (2)

Kndpr_Police_suraksha ratha (4)

Kndpr_Police_suraksha ratha (5)

Kndpr_Police_suraksha ratha (3)

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ-2015 ರ ಅಂಗವಾಗಿ ಸುರಕ್ಷಾ ರಥವು ತಾಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸಿ ಜನಜಾಗ್ರತಿ ಮೂಡಿಸಲಿದೆ.

ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಸೋಮವಾರ ಸಂಜೆ ಈ ಸುರಕ್ಷಾ ರಥಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕುಂದಾಪುರ ವ್ರತ್ತನಿರೀಕ್ಷಕ ದಿವಾಕರ್ ಪಿ.ಎಂ., ಠಾಣಾಧಿಕಾರಿ ನಾಸೀರ್ ಹುಸೇನ್, ಗ್ರಹರಕ್ಷಕದಳದ ಸೆಕೆಂಡ್ ಇನ್ ಕಮಾಂಡೇಂಟ್ ರಾಜೇಶ್ ಕೆ.ಸಿ. ಮೊದಲಾದವರು ಉಪಸ್ಥಿತರಿದ್ದರು.

ನಿತ್ಯ ಕುಂದಾಪುರ ಉಪವಿಭಾಗದ ವ್ಯಾಪ್ತಿಯ ಠಾಣೆಗಳ ವಿವಿಧ ಗ್ರಾಮಗಳಿಗೆ ತೆರಳಿ ಅಲ್ಲಿ ಜನರಿಗೆ ಕಾನೂನು ಅರಿವು, ಜನಜಾಗ್ರತಿ ಮೂಡಿಸುವ ಕಾರ್ಯ ನಡೆಯಲಿದೆ.

Write A Comment