ಕನ್ನಡ ವಾರ್ತೆಗಳು

ಕಾಂಗ್ರೆಸ್‌ಗೆ ಬಂಡಾಯದ ಬಿಸಿ  : ಕಾಂಗ್ರೆಸ್ ಕಾರ್ಯಕರ್ತರ ಬೆಂಬಲದೊಂದಿಗೆ ಜಯಪ್ರಕಾಶ ಹೆಗ್ಡೆ ನಾಮ ಪತ್ರ ಸಲ್ಲಿಕೆ

Pinterest LinkedIn Tumblr

Dc_nomintion_pic_2

ಮಂಗಳೂರು,ಡಿ.07 : ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರು ಈಗಾಗಲೇ ದ.ಕ.ಜಿಲ್ಲೆಯಿಂದ ನಿಕಟಪೂರ್ವ ಎಮ್.ಎಲ್.ಸಿ. ಪ್ರತಾಪ್‌ಚಂದ್ರ ಶೆಟ್ಟಿಯವರಿಗೆ ಬಿ.ಫಾರ್ಮ್ ನೀಡುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡಿದ್ದರೂ, ಬಂಡಾಯ ಅಭ್ಯರ್ಥಿಯಾಗಿ ಸ್ಫರ್ಧಿಸಲು ಮುಂದಾಗಿರುವ  ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಯವರು ಇಂದು ವಿಧಾನ ಪರಿಷತ್ ಚುನಾವಣೆಗೆ ತನ್ನ ನಾಮಪತ್ರ ಸಲ್ಲಿಸಿದ್ದಾರೆ. ಬ್ರಹ್ಮಾವರದಿಂದ ನೂರಾರು ಜನ ಯುವ ಕಾಂಗ್ರೆಸ್ ಕಾರ್ಯಕರ್ತರ ಪಡೆ ಮತ್ತು ಅಭಿಮಾನಿಗಳ ಭಾರೀ ಬೆಂಬಲದೊಂದಿಗೆ ಬ್ರಹ್ಮಾವರದಿಂದ ಮಂಗಳೂರಿಗೆ ಆಗಮಿಸಿದ ಅವರು ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

Hegde_nomintion_pic_2

ತಾನು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಸೆ ಮತ್ತು ಅಭಿಮಾನಿಗಳ ಬೆಂಬಲದಿಂದ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ಬಹುತೇಕ ಕಾರ್ಯಕರ್ತರ ಬೆಂಬಲ ತನಗಿದೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿರುವ ಮುಖಂಡರಲ್ಲಿ ಯಾರನ್ನು ಬೇಕಾದರೂ ಗುರುತಿಸಿ ಅರ್ಹತೆ ಇರುವವರಿಗೆ ಟಿಕೆಟ್ ನೀಡಿ ಎಂಬುದು ನನ್ನ ಆಗ್ರಹವಾಗಿತ್ತು ಎಂದು ಜಯಪ್ರಕಾಶ ಹೆಗ್ಡೆ ಈ ಸಂಧರ್ಭದಲ್ಲಿ ಸುದ್ಧಿಗಾರರಲ್ಲಿ ಹೇಳಿದ್ದಾರೆ.
ನಾನು ಪಕ್ಷದ ಶಿಸ್ತನ್ನು ಉಲ್ಲಂಘಿಸಿಲ್ಲ ಕಾರ್ಯಕರ್ತರ ಮನೋಭಾವನೆಗೆ ಸ್ಪಂದಿಸುತ್ತಿದ್ದೇನೆ. ನಾನು ಈಗಲೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ನನಗೆ ಯಾವುದೇ ಸ್ಥಾನಬೇಡ. ಅದಕ್ಕಾಗಿ ನಾಮಪತ್ರ ಸಲ್ಲಿಸುತ್ತಿರುವುದೂ ಅಲ್ಲ. ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಸ್ಪರ್ಧಿಸುತ್ತಿದ್ದೇನೆ. ಕಾಂಗ್ರೆಸ್‌ನಲ್ಲಿ ಅನೇಕ ಸಕ್ರಿಯ ಕಾರ್ಯಕರ್ತರಿದ್ದಾರೆ. ಜನಸಂಪರ್ಕವೇ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡುವ ಅವಶ್ಯಕತೆಯೇನು ಎಂದು ಅವರು ಪ್ರಶ್ನಿಸಿದರು.
ಈಗಲೂ ಕಾಲ ಮಿಂಚಿಲ್ಲ. ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದಲ್ಲಿ ತಾನು ನಾಮಪತ್ರ ಹಿಂಪಡೆಯಲು ಸಿದ್ಧ. ಬಿ ಫಾರ್ಮ್‌ ಕೊಟ್ಟ ಮೇಲೂ ಬದಲಾವಣೆ ಮಾಡಬಾರದೆಂಬ ನಿಯಮವೇನೂ ಇಲ್ಲ. ಲೋಕಸಭೆ ಚುನಾವಣೆಯ ಸಂದರ್ಭದಲ್ಲೂ ನಾಮಪತ್ರ ಸಲ್ಲಿಕೆಯಾದ ಮೇಲೆ ಬಿ ಫಾರ್ಮ್‌ ನೀಡಿದ ನಿದರ್ಶನವಿದೆ ಎಂದರು.

Write A Comment