ಕನ್ನಡ ವಾರ್ತೆಗಳು

ಸ್ನಾನಕ್ಕೆ ಇಳಿದ ಯುವಕ ಸುಳಿಗೆ ಸಿಲುಕಿ ಕಣ್ಮರೆ

Pinterest LinkedIn Tumblr

Man_drown_search_2

(ಸಾಂಧರ್ಬಿಕ ಚಿತ್ರ ) ಉಪ್ಪಿನಂಗಡಿ,ಡಿ.07: ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಸುಳಿಗೆ ಸಿಲುಕಿ ನೀರಿನ ಆಳಕ್ಕೆ ಬಿದ್ದು, ಯುವಕನೋರ್ವ ನೀರಿನಲ್ಲಿ ಕೊಚ್ಚಿ ಹೋಗಿ ಕಣ್ಮರೆಯಾಗಿರುವ ಘಟನೆ ಭಾನುವಾರ ಹತ್ಯಡ್ಕ ಗ್ರಾಮದ ತೆಪ್ಪದ ಗರಡಿ ಎಂಬಲ್ಲಿಂದ ನಡೆದಿದೆ.

ಹತ್ಯಡ್ಕದ ಲಕ್ಷ್ಮೀ ನಾರಾಯಣ ಭಟ್ ಎಂಬವರ ಪುತ್ರ ಅಜಯ್ ಕಾರ್ತಿಕ್ (19 ವ.) ನದಿ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಯುವಕ. ಇವರು ತನ್ನ ಸ್ನೇಹಿತರಾದ ವೃಕ್ಷವರ್ಧನ್, ಅನ್ವೇಶ್, ಹಾಗೂ ಚಂದನ್ ಖರೆ ಎಂಬವರೊಂದಿಗೆ ಮಧ್ಯಾಹ್ನ ಶಿಶಿಲ ಮುದ್ದಿಗೆ ಶ್ರೀ ಪರಶುರಾಮ ದೇವಸ್ಥಾನದ ಬಳಿ ಕಪಿಲಾ ನದಿಗೆ ಸ್ನಾನ ಮಾಡಲು ನೀರಿಗೆ ಇಳಿದಿದ್ದರೆನ್ನಲಾಗಿದೆ.

ಅಜಯ್ ಕಾರ್ತಿಕ್ ನೀರಿನಲ್ಲಿ ಮುಳುಗಿ ಸ್ನಾನ ಮಾಡುತ್ತಿದ್ದಂತೆ ನೀರಿನಲ್ಲಿ ಸುಳಿಗೆ ಸಿಲುಕಿ ಆಳಕ್ಕೆ ಬಿದ್ದು ಕೊಚ್ಚಿ ಹೋದರು. ಸ್ನೇಹಿತರು ಕೈ ಹಿಡಿದು ಎಳೆಯುತ್ತಿದ್ದಂತೆ ಅಜಯ್ ಅಳಕ್ಕೆ ಬಿದ್ದು ಕಣ್ಮರೆಯಾದರು ಎಂದು ಹೇಳಲಾಗಿದೆ.

ಅಗ್ನಿಶಾಮಕ ದಳದ ವಿಫಲ ಕಾರ್ಯಾಚರಣೆ: ಸ್ಥಳಕ್ಕೆ ಅಗ್ನಿಶಾಮಕ ದಳದವರನ್ನು ಕರೆಯಿಸಲಾಯಿತಾದರೂ ನೀರಲ್ಲಿ ಮುಳುಗುವ ತಜ್ಞರು ಇಲ್ಲ ಎಂದು ಅವರು ವಾಪಾಸ್ ಹೋಗಿದ್ದು, ಅಗ್ನಿಶಾಮಕ ದಳದ ಕಾರ್ಯವೈಖರಿಯ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಘಟನೆಯೂ ನಡೆಯಿತು. ಬಳಿಕ ಧರ್ಮಸ್ಥಳ, ನೆಲ್ಯಾಡಿ ಹಾಗೂ ಗೋಳಿತ್ತೊಟ್ಟು ಕಡೆಯಿಂದ ಬಂದ ನುರಿತ ಈಜುಗಾರರು ಹಲವಾರು ಬಾರಿ ಮುಳುಗಿದರೂ ವ್ಯಕ್ತಿ ಪತ್ತೆಯಾಗದ ಕಾರಣ ಕಾರ್ಯಾಚರಣೆಯನ್ನು ದ.೭ಕ್ಕೆ ಮುಂದೂಡಿದ್ದಾರೆ ಎಂದು ಹೇಳಲಾಗಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿ: ಅಜಯ್ ಕಾರ್ತಿಕ್‌ರವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುತ್ತಾರೆ. ಘಟನಾ ಸ್ಥಳದಲ್ಲಿ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದು, ಸಂಜೆಯ ತನಕವೂ ಯಾವುದೇ ಪ್ರಯೋಜನವಾಗಿಲ್ಲ ಉಪ್ಪಿನಂಗಡಿ ಎಸ್.ಐ. ತಿಮ್ಮಪ್ಪ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Write A Comment