ಕನ್ನಡ ವಾರ್ತೆಗಳು

ಜಾತಿ ವ್ಯವಸ್ಥೆಗಳ ಮಧ್ಯೆ ಮೀಸಲಾತಿ ಅಗತ್ಯ : ಸಚಿವ ಬಿ. ರಮಾನಾಥ ರೈ

Pinterest LinkedIn Tumblr

Congrs_ambedkr_rai

ಮಂಗಳೂರು, ಡಿ.7: ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುಣ್ಯತಿಥಿಯ ಅಂಗವಾಗಿ ರವಿವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು, ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರ ಬದ್ಧವಾಗಿದ್ದು, 12 ಕೋ.ರೂ. ವೆಚ್ಚದಲ್ಲಿ ಶೀಘ್ರದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು. ಭಾರತ ವಿವಿಧ ಜಾತಿ, ಧರ್ಮ-ಭಾಷೆ ಗಳ ಜನರಿರುವ ದೇಶವಾಗಿದ್ದು, ಇಲ್ಲಿಯ ಜಾತಿ ವ್ಯವಸ್ಥೆಗಳ ಮಧ್ಯೆ ಮೀಸಲಾತಿಯ ಅಗತ್ಯವಿದೆ. ಅದನ್ನು ಮನಗಂಡು ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನ 68 ವರ್ಷಗಳು ಕಳೆದರೂ ಇಂದಿಗೂ ಪ್ರಸ್ತುತ. ದೇಶದ 125 ಕೋಟಿ ಜನರಿಗೆ ರಕ್ಷಣೆ ನೀಡುವ ದೇಶದ ಧರ್ಮಗ್ರಂಥವಾಗಿರುವ ಸಂವಿಧಾನವನ್ನು ಎನ್‌ಡಿಎ ಸರಕಾರದ ಅವಧಿಯಲ್ಲಿ ತಿರುಚುವ ಕೆಲಸ ನಡೆಯುತ್ತಿದೆ. ಸಂವಿಧಾನದಲ್ಲಿರುವ ಜಾತ್ಯಾ ತೀತ ಪದದ ಬಗ್ಗೆ ಪ್ರಶ್ನಿಸುತ್ತಾರೆ. ದೇಶದ ಸಂವಿಧಾನವನ್ನು ತಿದ್ದುಪಡಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮುಹ್ಮುದ್ ಹನೀಫ್, ಕಾಂಗ್ರೆಸ್ ಮುಖಂಡರಾದ ಪಿ.ವಿ. ಮೋಹನ್, ಸುಧೀರ್ ಟಿ.ಕೆ., ಪದ್ಮನಾಭ ನರಿಂಗಾನ, ನಾಗೇಂದ್ರ, ಸುಭೋದ್ ಆಳ್ವ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ಸೇವಾದಳ ಮುಖಂಡ ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು.

Write A Comment