ಕನ್ನಡ ವಾರ್ತೆಗಳು

ಮಂಗಳೂರು :ಉಪನೋಂದಣಿ ಕಚೇರಿ ಸ್ಥಳಾಂತರ : ಸಾರ್ವಜನಿಕರ ಆಕ್ರೋಷ

Pinterest LinkedIn Tumblr

Mini_parlment_photo_1

ಮಂಗಳೂರು, ಡಿ,05 : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧದ ಮೂರನೇ ಮಹಡಿಗೆ ಸ್ಥಳಾಂತರಿಲು ಆದೇಶ ನೀಡಿದ ಅಧಿಕಾರಗಳ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಉಪನೋಂದಣಿ ಕಚೇರಿಯನ್ನು ಮೂರನೇ ಮಹಡಿಯಲ್ಲಿ ನಿರ್ಮಾಣ ಮಾಡುವುದರಿಂದ ಹಿರಿಯರು, ಅಂಗವಿಕಲರು, ಗರ್ಭಿಣಿಯರು ಇನ್ನಿತರ ಮಂದಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಲಿಫ್ಟ್ ವ್ಯವಸ್ಥೆಯೂ ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಪ್ರಸ್ತುತ ಇರುವ ಉಪನೋಂದಣಿ ಕಚೇರಿ 5000 ಚದರ ಅಡಿ ವಿಸ್ತೀರ್ಣವಿದೆ. ಮಿನಿ ವಿಧಾನ ಸೌಧದಲ್ಲಿ 800 ಚದರ ಅಡಿಯ ಕಚೇರಿಯನ್ನು ಮೂರನೇ ಮಹಡಿಯಲ್ಲಿ ನೀಡಲಾಗಿದೆ. ಪ್ರಸ್ತುತ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ 5 ಸರ್ಕಾರಿ ಸಿಬ್ಬಂದಿ , 10 ಕಂಪ್ಯೂಟರ್ ಹಾಗೂ ಆಪರೇಟರ್‌ಗಳು , ಕಂಪ್ಯೂಟರ್ ಸಿಪಿಯು , 20 ದಾಖಲೆ ಇರುವ ಕಪಾಟುಗಳಲ್ಲಿ 100 ವರ್ಷಗಳ ದಸ್ತಾವೇಜು ಸಂಗ್ರಹಿಸಲಾಗಿದೆ. ಮಂಗಳೂರು ತಾಲೂಕು ಉಪನೋಂದಣಾಧಿಕಾರಿ ಕಚೇರಿಯಲ್ಲಿ 5 ಮಂದಿ ಸರ್ಕಾರಿ ನೌಕರರು, 9 ಕಂಪ್ಯೂಟರ್ ಹಾಗೂ ಆಪರೇಟರ್‌ಗಳು ,20 ಕಪಾಟುಗಳಲ್ಲಿ ದಸ್ತಾವೇಜುಗಳಿವೆ. ಇವೆಲ್ಲವನ್ನು 800 ಚದರ ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ವ್ಯವಸ್ಥೆಗೊಳಿಸುವುದು ಕಷ್ಟ

ಪ್ರಸ್ತುತ ಜಿಲಾಧಿಕಾರಿ ಕಚೇರಿಯಲ್ಲಿರುವ ಸಹಾಯಕ ಆಯುಕ್ತರ ಕಚೇರಿ, ತಾಲೂಕು ಕಚೇರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಇತರ ಕಚೇರಿಗಳು ಮಿನಿ ವಿಧಾನಸೌಧಕ್ಕೆ ಸ್ಥಳಾಂತಗೊಳ್ಳುವುದರಿಂದ ಇಲ್ಲಿ ಸರ್ಕಾರ ವಾಹನ ಹಾಗೂ ಸಿಬ್ಬಂದಿ ವಾಹನಗಳಷ್ಟೇ ಪಾರ್ಕಿಂಗ್ ಗೆ ಅವಕಾಶವಿದೆ. ಪಾರ್ಕಿಂಗ್ ಸಮಸ್ಯೆ: ಮಿನಿ ವಿಧಾನಸೌಧದ ಕಟ್ಟಡ ಆವರಣದಲ್ಲಿ ಸರ್ಕಾರಿ ನೌಕರರ ಸಂಘದ ಕಟ್ಟಡ, ಪಿಂಚಣಿದಾರರ ಸಂಘದ ಕಟ್ಟಡ , ಮಣ್ಣು ಪರೀಕ್ಷಾ ಕೇಂದ್ರ ರೈತರ ಸಲಹಾ ಕೇಂದ್ರ ತಾಲೂಕು ಪಂಚಾಯತಿ ಕಟ್ಟಡಗಳಿವೆ. ಈ ಕಚೇರಿ ವಾಹನಗಳ ಜತೆಗೆ ಮಿನಿ ವಿಧಾನಸೌಧ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆಗೆ ಬೇರೆ ಜಾಗವಿಲ್ಲ.

ಪಾದಚಾರಿಗಳಿಗೂ ಕಷ್ಟ: ಬಸ್‌ಗಳಲ್ಲಿ ಬಂದವರು ರಸ್ತೆ ದಾಟುವುದು ಇಲ್ಲಿ ಪ್ರಯಾಸ ಈಗಾಗಲೇ ಹಂಪನಕಟ್ಟೆ ಸಿಗ್ನಲ್ ವೃತ್ತದಿಂದ ಹಾಗೂ ಸ್ಟೇಟ್ ಬ್ಯಾಂಕ್ ಕಡೆಯಿಂದ ಬರುವ ವಾಹನಗಳ ಸಾಲಿನಿಂದ ಸಾರ್ವಜನಿಕರು ರಸ್ತೆ ದಾಟುವಂತಹ ಪರಿಸ್ಥಿತಿ ಇದೆ. ತಾಲೂಕು ಕಚೇರಿ ಹಾಗೂ ಇತರ ಕಚೇರಿಗಳು ಸ್ಥಳಾಂತರಗೊಂಡರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

Write A Comment