ಕನ್ನಡ ವಾರ್ತೆಗಳು

ಬೈಂದೂರು: 9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ; ಕಾರಣ ನಿಗೂಢ

Pinterest LinkedIn Tumblr

ಕುಂದಾಪುರ: ವಿದ್ಯಾರ್ಥಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೈಂದೂರು ಸಮೀಪದ ಶಿರೂರು ಕೋಣಮಕ್ಕಿ ಕ್ರಾಸ್ ಬಳಿ ಬುಧವಾರ ನಡೆದಿದೆ.

ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾದ ಕೋಣಮಕ್ಕಿ ನಿವಾಸಿ ಶಶಾಂಕ(15) ವರ್ಷ ಆತ್ಮಹತ್ಯೆ ಮಾಡಿಕೊಂಡಾತ.

Byndoor_Student_shashank suiside

ಘಟನೆಯ ವಿವರ : ಕೋಣಮಕ್ಕಿಯ ಈಶ್ವರ ಮತ್ತು ಗುಲಾಬಿ ಅವರ ಪುತ್ರನಾದ ಶಶಾಂಕ್ ನಿತ್ಯ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದ. ಬುಧವಾರ ವಾಕಿಂಗ್ ತೆರಳಿದ್ದ ಆತ ಮನೆಗೆ ವಾಪಾಸಾಗದಿರುವ್ದನ್ನು ಕಂಡು ಮನೆಯವರು ಹುಡುಕಾಟ ಶುರುವಿಟ್ಟುಕೊಂಡಿದ್ದಾರೆ. ಮನೆಯ ಹಿಂಭಾಗದಲ್ಲಿರುವ ಅಕೇಶಿಯಾ ಮರಕ್ಕೆ ಶಶಾಂಕ್ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

ಕಾರಣ ನಿಗೂಢ : ಆತನ ಶಿಕ್ಷಕರು ಹೇಳುವ ಪ್ರಕಾರ ಶಶಾಂಕ್ ಡಿಸ್ಟಿಂಕ್ಷನ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು. ಆತ್ಮಹತ್ಯೆಗೆ ಮುನ್ನ ಮಾರ್ಕರ್ ಪೆನ್ನಿನಲ್ಲಿ ತನ್ನ ಬಲಗೈ ಮೇಲೆ ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Write A Comment