ಕನ್ನಡ ವಾರ್ತೆಗಳು

ಜ.3ರಂದು ಜಾಗತಿಕ ವಿದ್ವಾಂಸ ಝಾಕಿರ್ ನಾಯ್ಕ್ ಮಂಗಳೂರಿಗೆ

Pinterest LinkedIn Tumblr

Zakir_Naik-Meet

ಮಂಗಳೂರು : ಮುಂಬಯಿಯ ಐ‌ಆರ್‌ಎಫ್ ಅಧ್ಯಕ್ಷ, ಜಾಗತಿಕ ವಿದ್ವಾಂಸ ಡಾ.ಝಾಕಿರ್ ನಾಯ್ಕ್ ಜ.3ರಂದು ಮಂಗಳೂರಿಗೆ ಆಗಮಿಸಿ, ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದು, ಈ ಹಿನ್ನೆಲೆಯಲ್ಲಿ ಎಸ್‌ಕೆ‌ಎಸ್‌ಎಂ ಆಶ್ರಯದಲ್ಲಿ ಸಮಾಲೋಚನಾ ಸಭೆಯು ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಬುಧವಾರ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ, ಜಾಗತಿಕ ಧಾರ್ಮಿಕ ವಿದ್ವಾಂಸರೊಬ್ಬರು ಮಂಗಳೂರಿಗೆ ಆಗಮಿಸುವಾಗ ಶಿಸ್ತುಬದ್ಧವಾಗಿ ಕಾರ್ಯ ನಡೆಯಬೇಕಿದೆ. ಇದಕ್ಕೆ ಸರಕಾರರಿಂದ ಬೇಕಾದ ವ್ಯವಸ್ಥೆ ಮಾಡಿಸಲಾಗುವುದು. ಎಲ್ಲ ಸಮುದಾಯದವರೂ ಇದರಲ್ಲಿ ಭಾಗವಹಿಸುವಂತಾಗಬೇಕು ಎಂದರು.

ಶಾಸಕ ಬಿ.ಎ.ಮೊಹಿದಿನ್ ಬಾವ ಮಾತನಾಡಿ, ಸುಮಾರು 20 ವರ್ಷದ ನಂತರ ಝಾಕಿರ್ ನಾಯ್ಕ್ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಎಲ್ಲ ಭೇದ ಭಾವ ಮರೆತು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕು. ಜನರ ತಪ್ಪು ಕಲ್ಪನೆಗಳನ್ನು ದೂರ ಮಾಡಲು, ಯುವಕರಿಗೆ ಮಾರ್ಗದರ್ಶನ ನೀಡಲು ಇಂಥ ಕಾರ್ಯಕ್ರಮ ಅಗತ್ಯ ಎಂದರು.

ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಜಿಲ್ಲಾಧ್ಯಕ್ಷ ಯು.ಎಂ.ರಝಾಕ್, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಜಮಾ‌ಅತೆ ಇಸ್ಲಾಮೀ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞಿ, ಉಡುಪಿ- ದ.ಕ. ಜಿಲ್ಲಾ ಜಮೀಯತುಲ್ ಫಲಾಹ್ ಅಧ್ಯಕ್ಷ ಅಬ್ದುಲ್ ಲತೀಫ್, ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್, ಹಿದಾಯ ಫೌಂಡೇಶನ್ ಸ್ಥಾಪಕ ಕಾಸಿಂ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಬಿ.ಎಚ್.ಖಾದರ್, ಸಯ್ಯದ್ ಕರ್ನಿರೆ, ರಿಯಾಝ್ ಬಾವ, ಮುಸ್ತಫಾ ಉಪಸ್ಥಿತರಿದ್ದರು.

ಜಮೀಯತುಲ್ ಫಲಾಹ್ ಮುಖಂಡ ಶಾಹುಲ್ ಹಮೀದ್ ಕೆ.ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರುಪಿಸಿದರು. ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಪ್ರಾಸ್ತಾವಿಕ ಮಾತನಾಡಿದರು.

Write A Comment