ಕನ್ನಡ ವಾರ್ತೆಗಳು

ಕೊರಗಜ್ಜ ಸೇವಾ ಸಮಿತಿ ಕಟ್ಟಡದ ಕಿಟಕಿಗೆ ಕಲ್ಲೆಸೆತ : ಎರಡು ಕೋಮಿನ ಮುಖಂಡರಿಂದ ಕೊರಗಜ್ಜನಿಗೆ ಹರಕೆ

Pinterest LinkedIn Tumblr

Ullala_koragaja_gudi_1

ಉಳ್ಳಾಲ : ಕೊರಗಜ್ಜ ಸೇವಾ ಸಮಿತಿಯ ಕಟ್ಟಡದ ಕಿಟಕಿಗೆ ಬೈಕ್‍ ನಲ್ಲಿ ಬಂದ ಕಿಡಿಗೇಡಿಗಳು ಕಿಟಕಿಯ ಗಾಜಿಗೆ ಕಲ್ಲೆಸೆದು ಪರಾರಿಯಾದ ಘಟನೆ ಸೋಮವಾರ ರಾತ್ರಿ ತೊಕ್ಕೊಟ್ಟು, ಟಿ.ಸಿ. ರೋಡ್ ಬಳಿ ನಡೆದಿದೆ. ಕಲ್ಲೆಸೆತದ ಪರಿಣಾಮ ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ.

ಜನ ನಿಬಿಡ ಪ್ರದೇಶವಾಗಿರುವ ಟಿ.ಸಿ. ರೋಡ್‍ ನಲ್ಲಿ ತುಳಸಿ ಹಬ್ಬದ ಸಂಭ್ರನದಲ್ಲಿರುವಾಗ ರಸ್ತೆ ಬದಿಯಲ್ಲಿರುವ ಸೇವಾ ಸಮಿತಿ ಕಟ್ಟಡದ ಗಾಜಿಗೆ ಬೈಕ್‍ ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ.

Ullala_koragaja_gudi_2

Ullala_koragaja_gudi_3

ಕೊರಗಜ್ಜನಿಗೆ ಹರಕೆ :

ತೊಕ್ಕೊಟ್ಟು ಒಳಪೇಟೆಯಿಂದ ಉಳ್ಳಾಲ ದರ್ಗಾ ಸಂಪರ್ಕಿಸುವ ಟಿ.ಸಿ. ರೋಡ್‍ ನಲ್ಲಿ ಘಟನೆ ನಡೆಯುತ್ತಿದ್ದಂತೆ ಎರಡು ಕೋಮಿನ ಮುಖಂಡರು ಸ್ಥಳಕ್ಕೆ ಆಗಮಿಸಿದ್ದು ಘಟನೆಯನ್ನು ಸೌಹಾರ್ಧಯುತ ಕಾಪಾಡುವಂತೆ ಮನವಿ ಮಾಡಿದರು.

ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಭಗವಾನ್‍ ದಾಸ್, ಭರತ್ ಸೇರಿದಂತೆ ಉಳ್ಳಾಲ ನಗರಸಭಾ ಸದಸ್ಯ ಫಾರೂಕ್ ಯು.ಎಚ್.ಆಗಮಿಸಿ ಮಾತುಕತೆ ನಡೆಸಿದರು. ಕಲ್ಲೆಸೆತ ನಡೆಸಿದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಕೊರಗಜ್ಜನಿಗೆ ಹರಕೆ ಇಡಲಾಯಿತು.

ಘಟನಾ ಸ್ಥಳಕ್ಕೆ ಎ.ಸಿ.ಪಿ ಕಲ್ಯಾಣ್ ಶೆಟ್ಟಿ, ಉಳ್ಳಾಲ ಇನ್ಸ್ ಪೆಕ್ಟರ್ ಸವಿತ್ರ ತೇಜ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Write A Comment