ಕನ್ನಡ ವಾರ್ತೆಗಳು

ಗ್ಲೈಡಿಂಗ್ ಕಾರ್ಯಚರಣೆಯ ಅಣುಕು ಪ್ರದರ್ಶನ

Pinterest LinkedIn Tumblr

gilding_show_photo_2

ಮಂಗಳೂರು, ನ.18: ನಗರದ ನೆಹರೂ ಮೈದಾನದಲ್ಲಿ ಬುಧವಾರ ಆಕರ್ಷಕ ಗ್ಲೆಡಿಂಗ್ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಯಿತು.
13ನೆ ಸೇನಾ ತುಕಡಿ ವತಿಯಿಂದ ಆಯೋಜಿಸಲಾದ ಈ ಗ್ಲೆಡಿಂಗ್ ಕಾರ್ಯಾಚರಣೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಚಾಲನೆ ನೀಡಿದರು. ಸೇನೆಯ ಅಧಿಕಾರಿಗಳು ಮತ್ತು ವಿವಿಧ ದರ್ಜೆಯ ಸಿಬ್ಬಂದಿಗಾಗಿ ವೈಮಾನಿಕ ಮಾದರಿಯ ಸಾಹಸ ಕ್ರೀಡೆಯನ್ನು ಆಯೋಜಿಸಲಾಗಿತ್ತು.

ನೆಲದಿಂದ ಆಗಸಕ್ಕೆ ಚಿಮ್ಮುವ ಮತ್ತು ನೆಲದ ಗುರಿಯತ್ತ ಧಾವಿಸುವ ಸಾಹಸ ಕ್ರೀಡೆ ಇದಾಗಿದ್ದು, ಸೇನೆಯತ್ತ ಯುವಕರನ್ನು ಆಕರ್ಷಿಸಲು ಭಾರತೀಯ ಸೇನೆ ಸಾಹಸ ಮಯ ಕಸರತ್ತುಗಳನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸುತ್ತಿದೆ.

gilding_show_photo_2 gilding_show_photo_3 gilding_show_photo_4 gilding_show_photo_5 gilding_show_photo_6 gilding_show_photo_7 gilding_show_photo_8 gilding_show_photo_9 gilding_show_photo_10

ಗಾಳಿಯ ವೇಗವನ್ನು ಅನುಸರಿಸಿ ಹಾರಾಟ ನಡೆಸುವ ವಿಮಾನಗಳಲ್ಲಿ ಒಂದು ಯಶಸ್ವಿ ಹಾರಾಟ ನಡೆಸಿದರೆ, ಇನ್ನೊಂದು ಹಾರಿದ ಕೆಲವೇ ಕ್ಷಣಗಳಲ್ಲಿ ಧರೆಗುರುಳಿದೆ. ತಕ್ಷಣವೇ ಸೈನಿಕರು ವಿಮಾನದತ್ತ ಧಾವಿಸಿದರು.

ಪೈಲಟ್ ಎನ್‌ಕೆ ಸಂಜೀವ್ ಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ಮತ್ತೊಂದು ವೈಮಾನಿಕ ಪ್ರದರ್ಶನದ ಪೈಲಟ್ ಎನ್‌ಕೆ ಎ.ಸೆಲ್ವಂ ಕುಮಟಾದ ಕಡೆಗೆ ಗ್ಲೆಡಿಂಗ್ ನಡೆಸಿದ್ದಾರೆ.

Write A Comment