ಕರ್ನಾಟಕ

ಈ ವಾರ ನಾಲ್ಕು ಕನ್ನಡ ಸಿನೆಮಾಗಳು ತೆರೆಗೆ

Pinterest LinkedIn Tumblr

Boxer-movie

ಬೆಂಗಳೂರು: ದೀಪಾವಳಿ ಹಬ್ಬದ ನಂತರವೂ ಕನ್ನಡ ಸಿನೆಮಾಗಳ ಹಬ್ಬ ಮುಂದುವರೆದಿದೆ. ಸಿನೆರಸಿಕರಿಗೆ ಖುಷಿತರಬಲ್ಲ ಸಂಗತಿಯೆಂದರೆ ಈ ವಾರ ನಾಲ್ಕು ಸಿನೆಮಾಗಳು ತೆರೆ ಕಾಣಲಿವೆ.

ಆಕ್ಟೋಪಸ್: ‘ವಾಸ್ಕೋಡಿಗಾಮ’ ಮತ್ತು ತಮಿಳಿನ ‘ತೂಂಗವಾನಮ್’ನಲ್ಲಿ ಕಿಶೋರ್ ಅವರನ್ನು ಕಂಡಿರುವ ನೆನಪು ಹಸಿಹಸಿಯಾಗಿರುವಾಗಲೇ ಈಗ ಕಿಶೋರ್ ನಾಯಕನಟನಾಗಿ ನಟಿಸಿರುವ ‘ಆಕ್ಟೋಪಸ್’ ಗುರುವಾರ ಬಿಡುಗಡೆಗೆ ಸಿದ್ಧವಾಗಿದೆ. ಯಜ್ಞಾ ಶೆಟ್ಟಿ ನಾಯಕ ನಟಿಯಾಗಿದ್ದು ನಿರ್ದೇಶನ ಪಿ ಅಣ್ಣಯ್ಯನವರದ್ದು.

ಬಾಕ್ಸರ್: ನಟ ಧನಂಜಯ್ ಅವರು ಕನ್ನಡದಲ್ಲಿ ಯಶಸ್ಸು ಕಾಣುತ್ತಿರುವ ಯುವನಟ. ದೃಶ್ಯಂ ಹುಡುಗಿ ಎಂದೇ ಖ್ಯಾತರಾದ ಕೃತಿಕಾ ಸಹನಟಿ. ಪ್ರೀತಮ್ ಗುಬ್ಬಿ ನಿರ್ದೇಶನದ ಈ ಚಿತ್ರಕ್ಕಾ ಹರಿಕೃಷ್ಣ ಅವರ ಸಂಗೀತವಿದೆ. ಶುಕ್ರವಾರದಿಂದ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

ಬೆಂಗಳೂರು-560023: ಕಿರುತೆರೆಯಲ್ಲಿ ಹೆಸುರುವಾಸಿ ಕಾರ್ತಿಕ್ ಜಯರಾಂ (ಜೆಕೆ) ಬೆಳ್ಳಿತೆರೆಯಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ‘ಕಿರಾತಕ’ ನಿರ್ದೇಶಕ ಪ್ರದೀಪ್ ರಾಜ್ ನಿರ್ದೇಶನದಲ್ಲಿ ಈಗ ಜೆಕೆ ಮತ್ತೆ ಬೆಳ್ಳಿತೆರೆಗೆ ಬಂದಿದ್ದಾರೆ. ಚೆನ್ನೈ-600028 ಸಿನೆಮಾದ ರಿಮೇಕ್ ಇದು. ಈ ಚಿತ್ರವಾದರೂ ಜೆಕೆಗೆ ಬೆಳ್ಳಿತೆರೆಯಲ್ಲಿ ಭವಿಷ್ಯ ದೊರಕಿಸಿಕೊಡುವುದೇ?

ಮಾಮು ಟಿ ಅಂಗಡಿ: ಹೊಸಬರ ಪಡೆ ಕಟ್ಟಿಕೊಂಡು ಚಿತ್ರ ನಿರ್ದೇಶಿಸಿರುವ ಪರಮೇಶ್ ಅತಿಥಿ ನಟರಾಗಿ ನಟಿಸಲು ಶ್ರೀನಗರ ಕಿಟ್ಟಿ, ಅಜಯ್ ರಾವ್ ಮತ್ತು ಪ್ರೇಮ್ ಇವರನ್ನು ಕರೆತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ರಿಲೀಸ್.

Write A Comment