ಕನ್ನಡ ವಾರ್ತೆಗಳು

ಕುಲಾಲ ಸಂಘದ 85ನೇ ವಾರ್ಷಿಕ ಮಹಾಸಭೆ

Pinterest LinkedIn Tumblr

Kullal_mumbai_photo_1

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್

ಮುಂಬಯಿ : ನಗರದ ಹಿರಿಯ ಜಾತೀಯ ಸಂಸ್ಥೆ ಕುಲಾಲ ಸಂಘ ಮುಂಬಯಿ ಯ 85ನೇ ವಾರ್ಷಿಕ ಮಹಾಸಭೆಯು 15-11-2015 ರಂದು ಮಾಟುಂಗಾ ಪೂರ್ವ (ಮಧ್ಯ ರೈಲ್ವೆ), ದ ಮೈಸೂರು ಅಸೋಷಿಯೇಸನ್ ಸಮಿಪದ ಪಯನೂರು ಅಜ್ಯುಕೇಷನ್ ಟ್ರಸ್ಟ್ ಸಭಾಗೃಹ ದಲ್ಲಿ ಜರಗಿತು. ಕುಲಾಲ ಸಂಘದ ಗೌರವ ಅಧ್ಯಕ್ಷ ಪಿ. ಕೆ. ಸಾಲ್ಯಾನ್ ಅವರು ದೀಪ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಿದರು.

ಸಂಘದ ಅಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಿ. ಐ. ಮೂಲ್ಯ ವಾರ್ಷಿಕ ವರದಿ ಮಂಡಿಸಿದರೆ , ಗೌ. ಕೋಶಾಧಿಕಾರಿ ಜಯ ಅಂಚನ್ ಲೆಕ್ಕ ಪತ್ರವನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿದ್ದ ಸದಸ್ಯರು ಅದನ್ನು ಅನುಮೋದಿಸಿದರು.ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆಯಾದ ನೂತನ ಸಮಿತಿಯ ಸದಸ್ಯರ ಹೆಸರನ್ನು ಚುನಾವಣಾ ಅಧಿಕಾರಿ ರಾಜೇಶ್ ಬಂಜನ್ ವಾಚಿಸಿದರು.

Kullal_mumbai_photo_2 Kullal_mumbai_photo_3 Kullal_mumbai_photo_4 Kullal_mumbai_photo_5 Kullal_mumbai_photo_6 Kullal_mumbai_photo_7 Kullal_mumbai_photo_8

ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಉಪಾಧ್ಯಕ್ಷ, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ದೇವದಾಸ ಎಲ್ ಕುಲಾಲ್ ಮಾತನಾಡುತ್ತಾ ಸಮಾಜ ಬಾಂಧವರ ಪ್ರೋತ್ಸಾಹದಿಂದ ಸಂಘದ ಮೇಲಿನ ಅಭಿಮಾನದಿಂದ ಸಂಘ ಸದೃಢವಾಗಿ ಬೆಳೆದಿದೆ. ಎಲ್ಲಾ ಕಾರ್ಯಯೋಜನೆಗಳೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಜ್ಯೋತಿ ಕ್ರೆಡಿಟ್ ಸೊಸೈಟಿ ನಾಸಿಕ್ ಮತ್ತು ನಾಲಾಸೋಪಾರದಲ್ಲಿ ಪ್ರಾರಂಭಿಸುವ ಸಿದ್ದತೆಯಲ್ಲಿದ್ದೇವೆ. ಇದಕ್ಕೆ ಪರಿಸರದಲ್ಲಿರುವ ಸಮಾಜ ಬಾಂಧವರು ಸ್ಪಂದಿಸಬೇಕು ಎಂದರು.

ಕೋಶಾಧಿಕಾರಿ ಜಯ ಅಂಚನ್ ಮಾತನಾಡುತ್ತಾ ಮಂಗಳೂರಿನ ಬ್ರಹತ್ ಯೋಜನೆಗೆ ಸಮಾಜ ಬಾಂಧವರು ಪ್ರತಿದಿನ ಒಂದಿಷ್ಟು ಹಣವನ್ನು ಸಂಗ್ರಹಿಸುವ ಮೂಲಕ ಸಂಘದ ಯೋಜನೆಗೆ ನಿಧಿ ಸಂಗ್ರಹ ರೂಪದಲ್ಲಿ ಸಮರ್ಪಿಸಬೇಕೆಂದರು.

ನಿಧಿ ಸಂಗ್ರಹ ಸಮಿತಿಯ ಕಾರ್ಯದರ್ಶಿ ಪಾದೆಬೆಟ್ಟು ಶೇಖರ ಮೂಲ್ಯ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಮುಂದಿನ ಎರಡು ವರ್ಷಗಳ ಕಾರ್ಯಕಾರಿ ಸಮಿತಿಯಲ್ಲಿ ಪತ್ರಕರ್ತ ದಿನೇಶ್ ಕುಲಾಲ್ ಇಲ್ಲದಿದ್ದರೂ ಹಿಂದಿನಂತೆಯೇ ತನ್ನ ಸೇವಾ ಕಾರ್ಯವನ್ನು ಮುಂದುವರಿಸಲಿದ್ದಾರೆ ಎಂದು ಸಭೆಗೆ ತಿಳಿಸಿದ ಅವರು ಸಂಘ ನಿರ್ಣಯಿಸಿದ ಯೋಜನೆ ಸಪಲಗೊಳ್ಳಲು ಹಣದ ಅಗತ್ಯವಿದೆ. ಬಹು ದೊಡ್ಡ ಮೊತ್ತ ಸಂಗ್ರಹವಾಗುವಲ್ಲಿ ಸಮಾಜ ಬಾಂಧವರು ದೇಣಿಗೆ ಅಥವಾ ಠೇವಣಿ ಮೂಲಕ ಅರ್ಥಿಕ ನೆರವು ನೀಡಬೇಕೆಂದರು.

ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಲ್ಲಮಾರು ಗೋಪಾಲ ಬಂಗೇರ ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಿ ಕರ್ನಾಟಕ ಸರಕಾರದಿಂದ ಸಂಘದ ಮಂಗಳೂರಿನ ಯೋಜನೆಗೆ ಅನುದಾನ ಪಡೆಯಲು ಪ್ರಯತ್ನ ನಡೆಸುತ್ತೇವೆ. ಸಮಾಜ ಬಾಂದವರೆಲ್ಲರ ನಿಸ್ವಾರ್ಥ ಸೇವೆ ಅಗತ್ಯವಿದೆ ಎಂದರು.

ಅಮೂಲ್ಯ ಪತ್ರಿಕೆಯ ಉಪಸಂಪಾದಕ ವಿರಾರ್ ಶಂಕರ್ ವೈ ಮೂಲ್ಯ ಮಾತನಾಡುತ್ತಾ ಮಾತಿನಿಂದ ಯೋಜನೆಗಳು ರೂಪಗೊಳ್ಳಲು ಸಾಧ್ಯವಿಲ್ಲ ಯೋಜನೆಗೆ ತಮ್ಮೆಲ್ಲರ ನಿಧಿ ಸಂಗ್ರಹದ ಸಂಕಲ್ಪ ಅಗತ್ಯವಿದೆ ಎಂದು ತಾನು ಕಳೆದ ವರ್ಷದಂತೆ ದಿನನಿತ್ಯ ಸಂಗ್ರಹಿಸಿದ ದುಡ್ದಿನ ಡಬ್ಬವನ್ನು ಈ ಬಾರಿಯೂ ಸಂಘದ ಅಧ್ಯಕ್ಷರಿಗೆ ಸಮರ್ಪಿಸುತ್ತಾ ತನ್ನಂತೆಯೇ ಪ್ರತಿಯೊಬ್ಬರು ಈ ರೀತಿ ನಿಧಿ ಸಂಗ್ರಹಿಸಬೇಕೆಂದು ವಿನಂತಿಸಿದರು.

ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು, ಸಂಘ ಈ ವರ್ಷ ಗೋಡ್ ಬಂದರ್ ಜಾಗದಲ್ಲಿ ಆಯೋಜಿಸಿದ ಗಣೇಶೋತ್ಸವ, ನೃತ್ಯ ಪರ್ವ ಮುಂತಾದ ಕಾರ್ಯಗಳು ಯಶಸ್ವಿಗೊಳ್ಳುವಲ್ಲಿ ಸಮಾಜ ಬಾಂಧವರ ಹಾಗೂ ಸಂಘದ ಸದಸ್ಯರ ಅಪಾರ ಕೊಡುಗೆಯಿದೆ. ಮುಂದಿನ ದಿನಗಳಲ್ಲೂ ತಮ್ಮ ಸಹಕಾರದ ಅಗತ್ಯವಿದೆ ಎಂದರು.

ಠಾಣೆ – ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಕೃಷ್ಣ ಮೂಲ್ಯ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನ. 22 ರಂದು ಸಮಿತಿಯ ವಾರ್ಷಿಕೋತ್ಸವ ನಡೆಯಲಿದೆ. ಡಿ. 31 ರಂದು ಸಮಿತಿಯ ಆಶ್ರಯದಲ್ಲಿ ಕ್ರೀಡಾ ಕೂಟ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರದಲ್ಲಿ ಸಮಾಜ ಬಾಂಧವರು ಸಕ್ರಿಯ ಪಾತ್ರವನ್ನು ವಹಿಸಬೇಕೆಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಗಿರೀಶ್ ಬಿ. ಸಾಲ್ಯಾನ್ ಮಾತನಾಡುತ್ತಾ ಪ್ರತೀ ಸ್ಥಳೀಯ ಸಮಿತಿಯು ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತಿ ನೀಡುತ್ತದೆ. ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆಯಬೇಕು. ಸಂಘ ಸದೃಢವಾಗಿ ಬೆಳೆಯುವಲ್ಲಿ ಸಮಾಜ ಬಾಂಧವರ ಸದಸ್ಯತನದ ಅಗತ್ಯವಿದೆ. ಸಂಘ ಬಲಿಷ್ಟಗೊಂಡಾಗ ಸಮಾಜದ ಎಲ್ಲಾ ಬಂಧುಗಳಿಗೆ ಆಶ್ರಯವಾಗಲು ಸಾಧ್ಯವಾಗುತ್ತದೆ. ಠೇವಣಿ ಮತ್ತು ದೇಣಿಗೆ ಮೂಲಕ ಸಂಘದ ಮಂಗಳೂರಿನ ಸ್ವಂಥ ಜಾಗದಲ್ಲಿ ಬ್ರಹತ್ ಯೋಜನೆ ಶೀಘ್ರಗತಿಯಲ್ಲಿ ಸಾಗುತ್ತಿದೆ ಇದು ದಾನಿಗಳ ಮತ್ತು ಸಮಾಜ ಬಾಂಧವರ ಸಹಕಾರದಿಂದ ಸಾಧ್ಯವಾಗುತ್ತಿದೆ. ಮುಂದೆ ಯೋಜನೆ ಸಂಪೂರ್ಣವಾಗಿ ರೂಪುಗೊಳ್ಳಲು ಬಹುದೊಡ್ಡ ಮೊತ್ತದ ಅಗತ್ಯವಿದೆ. ತಾವೆಲ್ಲೆರೂ ಇದಕ್ಕೆ ಕೈಜೋಡಿಸಬೇಕು ಎಂದರು.

ವೇದಿಕೆಯಲ್ಲಿ ಸಂಘದ ಜೊತ ಕಾರ್ಯದರ್ಶಿಗಳಾದ ಶಶಿಕುಮಾರ್ ವಿ ಕುಲಾಲ್, ಸುನಿಲ್ ಕುಲಾಲ್, ಜೊತೆ ಕೋಶಾಧಿಕಾರಿ ರಾಜೇಶ್ವರಿ ನೇತ್ರಕೆರೆ, ನಿಧಿ ಸಂಗ್ರಹ ಸಮಿತಿಯ ಕೋಶಾದಿಕಾರಿ ಕರುಣಾಕರ ಬಿ ಸಾಲ್ಯಾನ್, ಅಮೂಲ್ಯ ಸಂಪಾದಕ ನಾರಾಯಣ ನೇತ್ರಕೆರೆ, ಸದಸ್ಯ ನೋಂದಾಣಿಕೆ ಸಮಿತಿಯ ಕಾರ್ಯಾಧ್ಯಕ್ಶ ಅಣ್ಣಿ ಸಿ. ಮೂಲ್ಯ, ಸಿ.ಎಸ್.ಟಿ. – ಮೂಲೂಂಡ್ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ಸುಂದರ್ ತೊಕ್ಕೋಟು, ಚರ್ಚ್ಗೇಟ್ – ದಹಿಸರ್ ಸಮಿತಿಯ ಕಾರ್ಯಾಧ್ಯಕ್ಷ ಡಾ. ನಿಕೇಶ್ ಮೂಲ್ಯ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಮನೋಜ್ ಸಾಲ್ಯಾನ್, ಮಮತಾ ಗುಜರನ್, ಲ. ಜಯರಾಮ ಮೂಲ್ಯ, ಮೀರಾ ವಿರಾರ್ ಸಮಿತಿಯ ಕಾರ್ಯದರ್ಶಿ ಮೋಹನ್ ಬಂಜರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂಧರ್ಬದಲ್ಲಿ ಸಂಘದ ಸಕ್ರಿಯ ಕಾರ್ಯಕರ್ತರಾದ ಪದ್ಮನಾಭ ಕೆ ಬಂಗೇರ ಡೊಂಬಿವಲಿ ದಂಪತಿ, ಕಣ್ನಪ್ಪ ಮೂಲ್ಯ ಸಾಕಿನಾಕ ದಂಪತಿ, ಬಾಬು ಟಿ. ಕುಲಾಲ್ ದಂಪತಿ, ಭಿವಂಡಿ, ಇವರನ್ನು ಸನ್ಮಾನಿಸಲಾಯಿತು. ದಿ. ಬಾಬು ಸಾಲ್ಯಾನ್ ಅವರ ಸ್ಮರಣಾರ್ತ ರೋಲಿಂಗ್ ಶೀಳ್ಡ್ ಶ್ರುತಿ ಜಯ ಅಂಚನ್, ದಿ. ಡಾ. ಸುಬ್ಬಯ್ಯ ಸ್ಮರಣಾರ್ಥ ರೋಲಿಂಗ್ ಶೀಳ್ಡ್ ದೀಕ್ಷಿತ ಎಸ್. ಗುಜರನ್, ದಿ. ಸುಂದರ ಕರ್ಮರನ್ ರೋಲಿಂಗ್ ಶೀಳ್ಡ್ ದಿಶಾ ಮೂಲ್ಯ ಅವರಿಗೆ ನೀಡಲಾಯಿತು. ವರ್ಷದ ಅತ್ಯುತ್ತಮ ಸಮಾಜ ಸೇವಕರಾಗಿ ಚಂದ್ರಶೇಖರ ಕುಲಾಲ್ ಭಾಯಂದರ್, ಅರುಣ್ ಧರ್ಮಣ್ಣ ಬಂಗೇರ, ಗೋರೆಗಾಂವ್ ಅವರನ್ನು ಗೌರವಿಸಲಾಯಿತು.

ಕೊನೆಯಲ್ಲಿ ಕಾರ್ಯದರ್ಶಿ ಡಿ. ಐ. ಮೂಲ್ಯ ಅಭಾರ ಮನ್ನಿಸಿದರು.

Write A Comment