ಕನ್ನಡ ವಾರ್ತೆಗಳು

ಮೈಸೂರು ಅಸೋಸಿಯೇಷನ್ ನಲ್ಲಿ ಸಂಗೀತ ನೃತ್ಯೋತ್ಸವ

Pinterest LinkedIn Tumblr

Mumbai_sangitha_prgrm_1

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್

ಮುಂಬೈ: ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರೆಲ್ಲರು ದೀಪಾವಳಿ ಹಬ್ಬದ ಮರು ದಿನ ಮುಂಬೈ ಜನತೆಗೆ ತಮ್ಮ ಕಾರ್ಯಕ್ರಮವನ್ನು ನೀಡುವುದರೊಂದಿಗೆ ಸಂಭ್ರವನ್ನು ಆಚರಿಸುತ್ತಿದ್ದಾರೆ. ಅಕಾಡೆಮಿಯ ಸದಸ್ಯರಾಗಿ ನೇಮಕವಾದ ತಕ್ಷಣದಿಂದಲೇ ಅಕಾಡೆಮಿಯಿಂದ ಸಿಗುವ ಎಲ್ಲಾ ಸವಲತ್ತುಗಳು ನಿಂತುಹೋಗುತ್ತವೆ. ಹಾಗಾಗಿ ಇಂದು ಇವರೆಲ್ಲರೂ ಯಾವುದೇ ಸಂಭಾವನೆ ಇಲ್ಲದೆ ಕಾರ್ಯಕ್ರಮ ನೀಡುತ್ತಿರುವ ಎಲ್ಲಾ ಸದಸ್ಯರನ್ನು ಕರ್ನಾಟಕ ಸರ್ಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಮುಂಬೈನ ಮೈಸೂರು ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಅಕಾಡೆಮಿಯ ಸದಸ್ಯರಿಂದ ನವೆಂಬರ್ ೧೪ ಹಾಗೂ ೧೫ ರಂದು ಎರಡು ದಿನಗಳ ಕಾಲ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಂತಸ ವ್ಯಕ್ತಪಡಿಸಿದರು.

Mumbai_sangitha_prgrm_2 Mumbai_sangitha_prgrm_3 Mumbai_sangitha_prgrm_4 Mumbai_sangitha_prgrm_5

ಇಡೀ ದೇಶದಲ್ಲೇ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ರಾಜ್ಯವೆಂದರೆ ಅದು ನಮ್ಮ ಕರ್ನಾಟಕ ಸರ್ಕಾರ ಎಂಬ ಹೆಮ್ಮೆ ನಮಗಿದೆ ಎಂದರು.

ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಅತಿಥಿಗಳೊಂದಿಗೆ ಎಲ್ಲಾ ಕಲಾವಿದರು ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಅತಿಥಿಗಳಾಗಿ ಅಸೋಸಿಯೇಷನ್ ನ ಟ್ರಸ್ಟಿ ಕೆ. ಮಂಜುನಾಥಯ್ಯ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯರೆಲ್ಲಾ ಒಂದೇ ವೇದಿಕೆಯಲ್ಲಿ ವಿಭಿನ್ನ ಪ್ರಕಾರದ ಕಾರ್ಯಕ್ರಮಗಳನ್ನು ನೀಡುತ್ತಿರುವುದಕ್ಕೆ ಶ್ಲಾಘಿಸುವುದರೊಂದಿಗೆ ಮೂಲಕ ಅಸೋಸಿಯೇಷನ್ ಅಧ್ಯಕ್ಷರಾದ ಕೆ. ಕಮಲ ಧನ್ಯವಾದಗಳನ್ನು ತಿಳಿಸಿದರು.

ಮೊದಲ ನ.೧೪ರಂದು ದಿನದ ಸಂಗೀತ ನೃತ್ಯೋತ್ಸವದಲ್ಲಿ ಗಾಯಕಿ ವಡವಾಟಿ ಶಾರದಾ ಭರತ್ ಅವರ ಹಿಂದುಸ್ಥಾನಿ ಶಾಸ್ತ್ರೀಯ ಹಾಗೂ ವಚನ ಗಾಯನ ದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಿತು. ರಫ಼ೀಕ್ ಖಾನ್ ಅವರ ಸಿತಾರ್ ವಾದನ, ಶಶಿಕಲಾ ಕುಲಹಳ್ಳಿ, ಬಸವರಾಜ ಭಂಟನೂರು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ನಡೆಸಿಕೊಟ್ಟರೆ ಡೇವಿಡ್ ಸುಗಮ ಸಂಗೀತ ನಡೆಸಿಕೊಟ್ಟರು. ಹೇಮಾ ದಿನೇಶ್ ವಾಘ ಮೋಡೆ ಹಾಗೂ ಅಶೋಕ್ ಕುಮಾರ್ ನೃತ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

ಎರಡನೇ ದ0ದು ಕಾರ್ಯಕ್ರಮದಲ್ಲಿ ರಾಜೇಂದ್ರಸಿಂಗ್ ಪವಾರ್ ಹಾರ್ಮೋನಿಯಂ, ಎಂ. ದ್ವಾರಕೀಶ್ ವೀಣಾವಾದನ, ಅನನ್ಯ ಭಾರ್ಗವ್, ರಾಜಪ್ರಭು ದೋತ್ರೆ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಮಾಲಿನಿ ರವಿಶಂಕರ್ ತಂಡದ ಕನಕ ವೈಭವ ನೃತ್ಯ ರೂಪಕ ಏರ್ಪಡಿಸಲಾಗಿತ್ತು.

ಅಸೋಸಿಯೇಷನ್ ಕಾರ್ಯದರ್ಶಿ ನಾರಾಯಣ ನವಿಲೇಕರ್ ವಂದನಾರ್ಪಣೆ ಮಾಡಿದರು. ದೂರದರ್ಶನದ ನಿರೂಪಕ ಮಾಜಿ ರೇಡಿಯೋಜಾಕಿ ಕೆ. ಯೋಗ ರವೀಶ್ ಭಾರತ್ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನದ ಕಾರ್ಯಕ್ರಮಗಳು ಕಲಾರಸಿಕರಿಗೆ ಹಬ್ಬವನ್ನು ಉಂಟುಮಾಡಿದೆ.

Write A Comment